ವಿದ್ಯಾರ್ಥಿನಿಯರಿಗೆ Vivo ಸ್ಕಾಲರ್‌ಶಿಪ್: ವಾರ್ಷಿಕ ₹60,000 ಆರ್ಥಿಕ ನೆರವು, ಇಂದೇ ಅರ್ಜಿ ಸಲ್ಲಿಸಿ

Spread the love

ಹೆಣ್ಣುಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ವಿವೊ ಇಂಡಿಯಾ (Vivo India) ‘ಕನ್ಯಾಜ್ಞಾನ್ ಸ್ಕಾಲರ್‌ಶಿಪ್ 2025-26 ಪ್ರಕಟಿಸಿದ್ದು, ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಾರ್ಷಿಕ 60,000 ರೂ. ಸಿಗಲಿದೆ. ಅರ್ಹತೆ ಮತ್ತು ಅರ್ಜಿ ಸಲ್ಲಿಕೆ ವಿವರ ಇಲ್ಲಿದೆ.

WhatsApp Group Join Now
Telegram Group Join Now

ದಾವಣಗೆರೆ: ಆರ್ಥಿಕವಾಗಿ ಹಿಂದುಳಿದಿರುವ, ಆದರೆ ಓದಿನಲ್ಲಿ ಮುಂದಿರುವ ಪ್ರತಿಭಾವಂತ ಹೆಣ್ಣುಮಕ್ಕಳ ಉನ್ನತ ವ್ಯಾಸಂಗಕ್ಕೆ ನೆರವಾಗುವ ನಿಟ್ಟಿನಲ್ಲಿ ಸ್ಮಾರ್ಟ್‌ಫೋನ್ ದೈತ್ಯ ವಿವೊ ಇಂಡಿಯಾ (vivo India) ಭರ್ಜರಿ ಸಿಹಿಸುದ್ದಿ ನೀಡಿದೆ. ತನ್ನ ಸಿಎಸ್‌ಆರ್ (CSR) ಉಪಕ್ರಮದ ಅಡಿಯಲ್ಲಿ ವಿವೊ ಕನ್ಯಾಜ್ಞಾನ್ ಸ್ಕಾಲರ್‌ಶಿಪ್ ಪ್ರೋಗ್ರಾಂ 2025-26 ಅನ್ನು ಘೋಷಿಸಿದ್ದು, ಅರ್ಹ ವಿದ್ಯಾರ್ಥಿನಿಯರಿಂದ ಅರ್ಜಿ ಆಹ್ವಾನಿಸಿದೆ.

ವಿಜ್ಞಾನ ಮತ್ತು ತಂತ್ರಜ್ಞಾನ (STEM) ಕ್ಷೇತ್ರದಲ್ಲಿ ವೃತ್ತಿಜೀವನ ರೂಪಿಸಲು ಬಯಸುವ ಯುವತಿಯರಿಗೆ ಯಾವುದೇ ಆರ್ಥಿಕ ಅಡೆತಡೆಗಳಿಲ್ಲದೆ ಶಿಕ್ಷಣ ಮುಂದುವರಿಸಲು ವಾರ್ಷಿಕ ₹60,000 ಗಳ ಬೃಹತ್ ಮೊತ್ತವನ್ನು ಈ ಸ್ಕಾಲರ್‌ಶಿಪ್ ಅಡಿ ನೀಡಲಾಗುತ್ತದೆ. ಯಾರೆಲ್ಲಾ ಅರ್ಜಿ ಸಲ್ಲಿಸಬಹುದು? ಏನೆಲ್ಲಾ ದಾಖಲೆಗಳು ಬೇಕು? ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ವಿದ್ಯಾರ್ಥಿವೇತನದ ಲಾಭಗಳು (Benefits)

  • ಆಯ್ಕೆಯಾದ ವಿದ್ಯಾರ್ಥಿನಿಯರಿಗೆ ವಾರ್ಷಿಕ 60,000 ರೂಪಾಯಿಗಳ ನಿಗದಿತ ವಿದ್ಯಾರ್ಥಿವೇತನ ಸಿಗಲಿದೆ.
  • ಈ ಮೊತ್ತವನ್ನು ಕಾಲೇಜು ಶುಲ್ಕ, ಹಾಸ್ಟೆಲ್ ಖರ್ಚು, ಲ್ಯಾಪ್‌ಟಾಪ್ (Laptop) ಖರೀದಿ, ಸಾರಿಗೆ ಮತ್ತು ಊಟದ ವೆಚ್ಚಗಳಿಗೆ ಬಳಸಿಕೊಳ್ಳಬಹುದು. (ಇದಕ್ಕಾಗಿ ಸೂಕ್ತ ಬಿಲ್‌ಗಳನ್ನು ಒದಗಿಸಬೇಕಾಗುತ್ತದೆ).

ಯಾರಿಗೆ ಈ ಸ್ಕಾಲರ್‌ಶಿಪ್ ಸಿಗಲಿದೆ? (Eligibility Criteria)

ಈ ವಿದ್ಯಾರ್ಥಿವೇತನವು ಕೇವಲ ಹೆಣ್ಣುಮಕ್ಕಳಿಗೆ ಮಾತ್ರ ಮೀಸಲಾಗಿದ್ದು, ಈ ಕೆಳಗಿನ ಅರ್ಹತೆಗಳನ್ನು ಹೊಂದಿರಬೇಕು:

  1. ವ್ಯಾಸಂಗ: ಪ್ರಸ್ತುತ ಬಿ.ಟೆಕ್ (B.Tech), ಬಿ.ಇ (B.E), ಬಿ.ಎಸ್ಸಿ (B.Sc), ಬಿಸಿಎ (BCA), ಎಂಬಿಬಿಎಸ್ (MBBS) ನಂತಹ STEM (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ಪದವಿ ಕೋರ್ಸ್‌ಗಳ ಮೊದಲನೇ ಅಥವಾ ಎರಡನೇ ವರ್ಷದಲ್ಲಿ ಓದುತ್ತಿರಬೇಕು. (ಸರ್ಕಾರಿ ಕಾಲೇಜು ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ).
  2. ಅಂಕಗಳು: ವಿದ್ಯಾರ್ಥಿನಿಯು 10ನೇ ತರಗತಿ, 12ನೇ ತರಗತಿ ಹಾಗೂ ಹಿಂದಿನ ಸೆಮಿಸ್ಟರ್‌ನಲ್ಲಿ ಕನಿಷ್ಠ 70% ಅಂಕಗಳನ್ನು ಗಳಿಸಿರಬೇಕು.
  3. ಆದಾಯ ಮಿತಿ: ಕುಟುಂಬದ ವಾರ್ಷಿಕ ಆದಾಯವು ಎಲ್ಲಾ ಮೂಲಗಳಿಂದ 5 ಲಕ್ಷ ರೂಪಾಯಿಗಳಿಗಿಂತ ಕಡಿಮೆ ಇರಬೇಕು.
  4. ಷರತ್ತು: ಈಗಾಗಲೇ ಸರ್ಕಾರದಿಂದ ಅಥವಾ ಬೇರೆ ಸಂಸ್ಥೆಗಳಿಂದ ಸಂಪೂರ್ಣ ಸ್ಕಾಲರ್‌ಶಿಪ್ ಪಡೆಯುತ್ತಿರುವವರು ಇದಕ್ಕೆ ಅರ್ಹರಾಗಿರುವುದಿಲ್ಲ.

(ಸೂಚನೆ: ಸಿಂಗಲ್ ಪೇರೆಂಟ್, ಅನಾಥ ಮಕ್ಕಳು, ಎಸ್‌ಸಿ/ಎಸ್‌ಟಿ (SC/ST) ಹಾಗೂ ಕ್ರೀಡಾಪಟುಗಳಿಗೆ ಆಯ್ಕೆಯಲ್ಲಿ ವಿಶೇಷ ಆದ್ಯತೆ ನೀಡಲಾಗುತ್ತದೆ).

ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು (Required Documents)

  1. ಇತ್ತೀಚಿನ ಪಾಸ್‌ಪೋರ್ಟ್ ಅಳತೆಯ ಫೋಟೋ.
  2. ಸರ್ಕಾರಿ ಗುರುತಿನ ಚೀಟಿ (ಆಧಾರ್, ಪಾನ್ ಕಾರ್ಡ್ ಅಥವಾ ವೋಟರ್ ಐಡಿ).
  3. ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಕಾಲೇಜಿನ ಐಡಿ ಕಾರ್ಡ್ (ID Card) ಅಥವಾ ಪ್ರವೇಶ ಪತ್ರ.
  4. ಹಿಂದಿನ ವರ್ಷದ/ಸೆಮಿಸ್ಟರ್‌ನ ಅಂಕಪಟ್ಟಿ (Marksheet).
  5. ಆದಾಯ ಪ್ರಮಾಣಪತ್ರ (Income Certificate).
  6. ವಿದ್ಯಾರ್ಥಿನಿಯ ಅಥವಾ ಪೋಷಕರ ಜಂಟಿ ಬ್ಯಾಂಕ್ ಖಾತೆಯ ಪಾಸ್‌ಬುಕ್ ಪ್ರತಿ.
  7. ಕಾಲೇಜಿನ ಸಂಪೂರ್ಣ ಶುಲ್ಕದ ವಿವರ (Fee Structure).
  8. ಜಾತಿ ಪ್ರಮಾಣಪತ್ರ
  9. ಪ್ರಬಂಧ (Essay): “ನಾನು ಈ ಕ್ಷೇತ್ರವನ್ನು ಏಕೆ ಆಯ್ಕೆ ಮಾಡಿಕೊಂಡಿದ್ದೇನೆ ಮತ್ತು ಈ ಸ್ಕಾಲರ್‌ಶಿಪ್ ನನಗೆ ಹೇಗೆ ಸಹಾಯ ಮಾಡುತ್ತದೆ” ಎಂಬ ಬಗ್ಗೆ 200 ಪದಗಳ ಕಿರು ಪ್ರಬಂಧ ಬರೆಯಬೇಕು.

ಅರ್ಜಿ ಸಲ್ಲಿಸುವುದು ಹೇಗೆ? (How to Apply)

ಅರ್ಹ ವಿದ್ಯಾರ್ಥಿನಿಯರು ಆನ್‌ಲೈನ್ ಮೂಲಕ ಸುಲಭವಾಗಿ ಅರ್ಜಿ ಸಲ್ಲಿಸಬಹುದು:

Apply Now vivo KanyaGyaan Scholarship Program 2025-26

Step 1: Buddy4Study ನ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

Step 2: ಅಲ್ಲಿರುವ ‘vivo KanyaGyaan Scholarship Program 2025-26’ ಲಿಂಕ್ ಮೇಲೆ ಕ್ಲಿಕ್ ಮಾಡಿ.

Step 3: ನಿಮ್ಮ ಇಮೇಲ್ ಅಥವಾ ಮೊಬೈಲ್ ಸಂಖ್ಯೆ ಬಳಸಿ ಲಾಗಿನ್ ಆಗಿ (ಖಾತೆ ಇಲ್ಲದಿದ್ದರೆ ಹೊಸದಾಗಿ Sign up ಮಾಡಿ).

Step 4: Start Application ಮೇಲೆ ಕ್ಲಿಕ್ ಮಾಡಿ, ನಿಮ್ಮ ಸಂಪೂರ್ಣ ಮಾಹಿತಿ ಭರ್ತಿ ಮಾಡಿ.

Step 5: ಮೇಲೆ ತಿಳಿಸಿದ ಎಲ್ಲಾ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.

Step 6: ಕೊನೆಯದಾಗಿ ಒಮ್ಮೆ ಪರಿಶೀಲಿಸಿ (Preview) ‘Submit’ ಬಟನ್ ಕ್ಲಿಕ್ ಮಾಡಿ.

Apply Now vivo KanyaGyaan Scholarship Program 2025-26

ಪ್ರಮುಖ ಸೂಚನೆಗಳು: ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು

ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top