ಗ್ಯಾರಂಟಿ ಯೋಜನಾ ಅನುಷ್ಠಾನ ಅಧ್ಯಕ್ಷರಿಂದ ಮಹತ್ವದ ಘೋಷಣೆ – Gruhalakshmi: ಪರಿಷ್ಕರಣೆವರೆಗೂ 2000 ಗೃಹಲಕ್ಷ್ಮಿ ಹಣ ನಿಲ್ಲುತ್ತಾ? 2026

Spread the love

ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಸದ್ಯಕ್ಕೆ ಹೊಸ ಅರ್ಜಿ ಸಲ್ಲಿಸುವ ಅವಕಾಶ ಇಲ್ಲವಾಗಿದೆ. ಯೋಜನೆಗಳ ಪರಿಷ್ಕರಣೆವರೆಗೂ ಗೃಹಜ್ಯೋತಿ ಜೊತೆ ಗೃಹಲಕ್ಷ್ಮೀ ಹಣ ನಿಲ್ಲುತ್ತಾ?

WhatsApp Group Join Now
Telegram Group Join Now

ಬೆಂಗಳೂರು (ಜೂ.22): ರಾಜ್ಯ ಸರ್ಕಾರದ ಪ್ರಮುಖ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ (Gruhalakshmi) ಹಾಗೂ ಗೃಹಜ್ಯೋತಿ (Gruhajyothi) ಯೋಜನೆಗಳ ಪರಿಷ್ಕರಣೆ ಪ್ರಕ್ರಿಯೆ ನಡೆದಿದೆ. ಅನರ್ಹ ಫಲಾನುಭವಿಗಳನ್ನ ಪಟ್ಟಿಯಿಂದ ಹೊರ ತೆಗೆಯುವ ಕೆಲಸ ನಡೆಯುತ್ತಿದೆ. ಇದರ ನಡುವೆ ಅರ್ಹ ಫಲಾನುಭವಿಗಳು ಮತ್ತೆ ಹೊಸ ಅರ್ಜಿಸಬೇಕಿದೆ. ಹೊಸ ಅರ್ಜಿ (New Application) ಸಲ್ಲಿಸುವವರೆಗೂ ಗೃಹಲಕ್ಷ್ಮಿ ಹಣ ಬರಲ್ವಾ? ಹೊಸ ಅರ್ಜಿ ಯಾವಾಗ ಬಿಡುಗಡೆ ಆಗುತ್ತೆ? ಅನ್ನೋ ಗೊಂದಲ ಜನರಲ್ಲಿ ಮನೆ ಮಾಡಿದೆ. ಈ ಬಗ್ಗೆ ಮಾತಾಡಿದ ಗ್ಯಾರಂಟಿ ಯೋಜನಾ ಅನುಷ್ಠಾನದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಅವರು ರಾಜ್ಯದ ಜನರಿಗೆ ಮಹತ್ವ ಮಾಹಿತಿ ನೀಡಿದ್ದಾರೆ.

ಸದ್ಯಕ್ಕಿಲ್ಲ ಹೊಸ ಅರ್ಜಿ!
*ಗ್ಯಾರಂಟಿ ಯೋಜನೆಯ ಫಲಾನುಭವಿಗಳಿಗೆ ಸದ್ಯಕ್ಕೆ ಹೊಸ ಅರ್ಜಿ ಸಲ್ಲಿಸುವ ಅವಕಾಶ ಇಲ್ಲವಾಗಿದೆ.

*ಗೃಹಜ್ಯೋತಿ, ಗೃಹಲಕ್ಷ್ಮೀ ಯೋಜನೆ ಪರಿಷ್ಕರಣೆ ಜೊತೆ ಹೊಸ ಅರ್ಜಿ ಸಲ್ಲಿಕೆ ಕೂಡ ವಿಳಂಬವಾಗ್ತಿದೆ. 

*ಸದ್ಯಕ್ಕೆ ಜನರಿಗಿಲ್ಲ ಎರಡು ಯೋಜನೆಗಳಿಗೆ ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲ.

*ಇನ್ನೂ ಅರ್ಜಿ ಸಲ್ಲಿಕೆ ದಿನಾಂಕ ನಿಗದಿಯಾಗಿಲ್ಲ ಎಂದು ಗ್ಯಾರಂಟಿ ಯೋಜನಾ ಅನುಷ್ಠಾನದ ಅಧ್ಯಕ್ಷ ಹೆಚ್.ಎಂ.ರೇವಣ್ಣ ತಿಳಿಸಿದ್ದಾರೆ.

ಗೃಹಜ್ಯೋತಿ ಜೊತೆ ಗೃಹಲಕ್ಷ್ಮಿ ಹಣವೂ ನಿಲ್ಲುತ್ತಾ?
1)ಸಭೆಯಲ್ಲಿ ಪರಿಷ್ಕರಣೆ ಮುಗಿಯುವವರೆಗೂ ಅರ್ಜಿ ಆಹ್ವಾನ ಮಾಡದಿರಲು ತೀರ್ಮಾನ ಮಾಡಲಾಗಿದೆ.

2)ಈ ಹಿನ್ನೆಲೆ ಅರ್ಜಿ ಸಲ್ಲಿಕೆಗೆ ಜನರು ಇನ್ನೂ ಕಾಯಬೇಕಾದ ಪರಿಸ್ಥಿತಿ ಇದೆ ಎಂದ್ರು.

3)ಗ್ಯಾರಂಟಿ ಯೋಜನೆ ಪರಿಷ್ಕರಣೆ ಮಾಡೋವರೆಗೂ ಗೃಹಲಕ್ಷ್ಮಿ ಹಣ ಬರೋದಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಹೆಚ್​.ಎಂ ರೇವಣ್ಣ ಅವ್ರು, ಸದ್ಯಕ್ಕೆ ಹಿಂದಿನಂತೆಯೇ ಯೋಜನೆ ಮುಂದುವರೆಯುತ್ತಿದೆ.

5)ಗೃಹಲಕ್ಷ್ಮಿ ಹಣ ಬರೋದು ಹಾಗೂ ವಿದ್ಯುತ್ ನೀಡುವುದನ್ನ ಯಾವುದೇ ಕಾರಣಕ್ಕೂ ನಿಲ್ಲಿಸೋದಿಲ್ಲ ಎಂದು ನ್ಯೂಸ್ 18ಗೆ ಹೆಚ್.ಎಂ.ರೇವಣ್ಣ ಮಾಹಿತಿ ನೀಡಿದ್ದಾರೆ.

ಹೊಸ ಅರ್ಜಿ ಸಲ್ಲಿಕೆ ಮಾಡೋದು ಯಾವಾಗ?
ಗ್ಯಾರಂಟಿ ಪರಿಷ್ಕರಣೆಯಿಂದಾಗಿ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆ ಬಗ್ಗೆ ನಾನಾ ಗೊಂದಲ ಮೂಡಿದೆ. ಹೊಸ ಅರ್ಜಿ ಕುರಿತು ಗ್ಯಾರಂಟಿ ಯೋಜನಾ ಅನುಷ್ಟಾನದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಅವರು ಈ ಕುರಿತು ಮಹತ್ವದ ಮಾಹಿತಿ ನೀಡಿದ್ದಾರೆ.

ಫಲಾನುಭವಿಗಳ ಪರಿಷ್ಕರಣೆ ಫಸ್ಟ್​!
*ಇಡೀ ರಾಜ್ಯದ ಫಲಾನುಭವಿಗಳ ಲಿಸ್ಟ್​ ಪರಿಷ್ಕರಣೆ ಆಗುವವರೆಗೂ ಅರ್ಜಿ ಸಲ್ಲಿಕೆಗೆ ದಿನಾಂಕ ಘೋಷಣೆಯಾಗೋದಿಲ್ಲ ಎಂದು ಗ್ಯಾರಂಟಿ ಯೋಜನಾ ಅನುಷ್ಠಾನದ ಅಧ್ಯಕ್ಷ ಹೆಚ್.ಎಂ.ರೇವಣ್ಣ ಹೇಳಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿ ಚರ್ಚೆ ಕೂಡ ನಡೆಸಲಾಗಿದೆ.

ಆ್ಯಪ್ ಮೂಲಕ ಗ್ಯಾರಂಟಿ ಪರಿಷ್ಕರಣೆ
*ಆ್ಯಪ್ ಮೂಲಕ ಗ್ಯಾರಂಟಿ ಪರಿಷ್ಕರಣೆ ನಡೆಸಲು ಸರ್ಕಾರ ನಿರ್ಧರಿಸಿದ್ದು, ಒಂದು ವಾರದಲ್ಲಿ ಮರು ಪರಿಶೀಲನೆ ಸರ್ವೆ ಶುರುವಾಗಲಿದೆ.

*ಸರ್ವೆ ಮಾದರಿಯಲ್ಲೇ ಮರು ಪರಿಶೀಲನೆ ನಡೆಯಲಿದ್ದು, ಮನೆ ಮನೆಗೆ ತೆರಳಿ ಆ್ಯಪ್ ಮೂಲಕ ನಾಲ್ಕು ಸಾವಿರ ಸಿಬ್ಬಂದಿಯಿಂದ ಮರು ಪರಿಶೀಲನೆ ನಡೆಯಲಿದೆ.

*ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಇಲಾಖಾ ಅಧಿಕಾರಿಗಳಿಂದ ಸರ್ವೆಯಲ್ಲಿ ಭಾಗಿಯಾಗಲಿದ್ದಾರೆ.

ಪ್ರಮುಖ ಸೂಚನೆಗಳು:ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು

ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top