Ration Card: ಪಡಿತರ ಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ: ಇಲ್ಲಿದೆ ಬೇಕಾಗುವ ದಾಖಲೆಗಳ ವಿವರ

Spread the love

Ration Card: ಪಡಿತರ ಚೀಟಿ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಇದು ಬರೀ ಪಡಿತರ ಪಡೆಯಲು ಅಷ್ಟೇ ಅಲ್ಲದೆ, ಹಲವಾರು ಸರ್ಕಾರಿ ಸಲಭ್ಯಗಳಿಗೆ ಅರ್ಜಿ ಸಲ್ಲಿಕೆ ವೇಳೆ ಬೇಕೇ ಬೇಕಾಗುತ್ತದೆ. ಒಂದು ವೇಳೆ ಇದರಲ್ಲಿ ತಪ್ಪುಗಳಿದ್ದರೆ, ಯಾವುದೇ ಅರ್ಜಿ ಸಲ್ಲಿಕೆಗೆ ಪರಿಗಣೆಗೆ ತೆಗೆದುಕೊಳ್ಳಲಾಗುವುದಿಲ್ಲ. ಅಂತಹ ಪಡಿತರ ಚೀಟಿದಾರರಿಗೆ ಇದೀಗ ಶುಭಸುದ್ದಿ ಇದ್ದು, ತಿದ್ದುಪಡಿಗೆ ಮತ್ತೆ ಅವಕಾಶ ಕಲ್ಪಿಸಲಾಗಿದೆ.

WhatsApp Group Join Now
Telegram Group Join Now

ಸದ್ಯ ರಾಜ್ಯದಲ್ಲಿ ನಕಲಿ ದಾಖಲೆ ಸೃಷ್ಟಿಸಿ ಪಡೆದಂತಹ ಬಿಪಿಎಲ್‌ ಕಾರ್ಡ್‌ಗಳನ್ನು ರದ್ದುಪಡಿಸಿ ಎಪಿಎಲ್‌ಗೆ ವರ್ಗಾವಣೆ ಮಾಡುವ ಕಾರ್ಯ ಮುಂದುವರೆದಿದೆ. ಈ ಮೂಲಕ ಅನರ್ಹರಿಗೆ ಕಡಿವಾಣ ಹಾಕುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ಈ ನಡುವೆಯೇ ಇದೀಗ ಪಡಿತರ ಚೀಟಿ ತಿದ್ದುಪಡಿ ಪ್ರಕ್ರಿಯೆಯನ್ನು ಮತ್ತೆ ಆರಂಭಿಸಲಾಗಿದೆ. ಹಾಗಾದ್ರೆ, ಏನೆಲ್ಲಾ ತಿದ್ದುಪಡಿ ಮಾಡಿಸಬಹುದು ಹಾಗೂ ಬೇಕಾಗುವ ದಾಖಲೆಗಳೇನು ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ತಿದ್ದುಪಡಿಗೆ ಎಲ್ಲೆಲ್ಲಿ ಅರ್ಜಿ ಸಲ್ಲಿಸಬಹುದು?: ಫಲಾನುಭವಿಗಳು ಬೆಂಗಳೂರು ಒನ್, ಗ್ರಾಮ ಒನ್, ಸೈಬರ್ ಸೆಂಟರ್‌ಗಳಲ್ಲಿ ಪಡಿತರ ಚೀಟಿ ತಿದ್ದುಪಡಿ ಮಾಡಿಸಲು ಅವಕಾಶ ಕಲ್ಪಿಸಲಾಗಿದೆ. ಈಗಾಗಲೇ ಪಡಿತರ ಚೀಟಿ ಹೊಂದಿದವರು ಹೊಸದಾಗಿ ಮಕ್ಕಳು ಅಥವಾ ತಮ್ಮ ಕುಟುಂಬದ ಇತರ ಸದಸ್ಯರ ಸೇರ್ಪಡೆಗೆ ಅವಕಾಶ ನೀಡಲಾಗಿದೆ. ಹೆಚ್ಚಿನ ಮಾಹಿತಿಗಾಗಿ http://ahara.kar.nic.in ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ಬೇಕಾಗುವ ಅಗತ್ಯ ದಾಖಲೆಗಳು

* ಪಡಿತರ ಚೀಟಿ

* ಎಲ್ಲಾ ಸದಸ್ಯರ ಆಧಾರ್ ಕಾರ್ಡ್, ಒಬ್ಬ ಸದಸ್ಯರ ಜಾತಿ ಮತ್ತು ಆದಾಯ ಪ್ರಮಾಣ ಪತ್

* ಸದಸ್ಯರ ಜಾತಿ ಮತ್ತು ಆದಾಯ 6 ವರ್ಷ ಮೆಲ್ಪಟ್ಟವರಿಗೆ

* ಜನನ ಪ್ರಮಾಣ ಪತ್ರ 6 ವರ್ಷದ ಒಳಗಿನ ಮಕ್ಕಳಿದ್ದರೆ

ಮಗುವಿನ ಹೆಸರು ಸೇರ್ಪಡೆಗೆ ಬೇಕಾದ ದಾಖಲೆಗಳು

* ಮಗುವಿನ ಜನನ ಪ್ರಮಾಣಪತ್ರ

* ಪೋಷಕರ ಆಧಾರ್ ಕಾರ್ಡ್

ಏನೆಲ್ಲಾ ತಿದ್ದುಪಡಿಗೆ ಅವಕಾಶ?

* ಹೆಸರು ತಿದ್ದುಪಡಿ

* ಹೆಸರು ಸೇರ್ಪಡೆ

* ಹೆಸರು ತೆಗೆದುಹಾಕುವಿಕೆ

* ವಿಳಾಸ ಬದಲಾವಣೆ

* ಫೋಟೋ ಬದಲಾವಣೆ

* ಕುಟುಂಬ ಮುಖ್ಯಸ್ಥರ ಬದಲಾವಣೆ

* ನ್ಯಾಯಬೆಲೆ ಅಂಗಡಿ ಬದಲಾವಣೆ

* ಫೋಟೋ ಬದಲಾವಣೆ

ಪತ್ನಿ ಹೆಸರು ಸೇರ್ಪಡೆಗೆ ಬೇಕಾಗುವ ದಾಖಲೆಗಳು

* ಆಧಾರ್ ಕಾರ್ಡ್

* ಮದುವೆ ಪ್ರಮಾಣ ಪತ್ರ

*ಪೋಷಕರ ಪಡಿತರ ಚೀಟಿ

ಅರ್ಜಿ ಸಲ್ಲಿಸುವ ವಿಧಾನಗಳು

* ಅಧಿಕೃತ ವೆಬ್ ಸೈಟ್ https://ahara.kar.nic.in/homeಗೆ ಭೇಟಿ ನೀಡಿ

* ಮುಖ್ಯ ಪುಟದಲ್ಲಿ ಇ-ಸೇವೆಗಳ ಮೇಲೆ ಕ್ಲಿಕ್ ಮಾಡಿ

* ತಿದ್ದುಪಡಿ/ಹೊಸ ಸೇರ್ಪಡೆಗೆ ವಿನಂತಿ ಆಯ್ಕೆ ಮೇಲೆ ಕ್ಲಿಕ್ ಮಾಡಿ

* ಹೊಸ ಪೇಜ್‌ನಲ್ಲಿ ಫಾರ್ಮ್‌ನಲ್ಲಿ ಅಗತ್ಯ ಮಾಹಿತಿಯನ್ನ ಭರ್ತಿ ಮಾಡಿ

* ಅಗತ್ಯ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್‌ ಮಾಡಿ ಫಾರ್ಮ್ ಸಲ್ಲಿಸಿ (ಸಬ್ಮಿಟ್‌ ಮೇಲೆ ಕ್ಲಿಕ್‌ ಮಾಡಿ)

* ಅರ್ಜಿ ಸಲ್ಲಿಕೆ ವೇಳೆ ಎಲ್ಲಾ ದಾಖಲಾತಿಗಳು ಸರಿಯಾಗಿದ್ದರೆ, ನಿಮ್ಮ ಮನಗೆ ಅಪ್ಡೇಟ್‌ ಆಗಿರುವ ಹೊಸ ಪಡಿತರ ಚೀಟಿ ಬರಲಿದೆ.

ಕಳೆದ ಕೆಲವು ದಿನಗಳ ಹಿಂದೆ ಪಡಿತರ ಚೀಟಿ ತಿದ್ದುಪಡಿಯನ್ನು ನಿಲ್ಲಿಸಲಾಗಿತ್ತು. ಆದರೆ, ಇದೀಗ ಮತ್ತೆ ಅವಕಾಶ ಕಲ್ಪಿಸಲಾಗಿದೆ. ಫಲಾನುಭವಿಗಳು ತಮ್ಮ ಪಡಿತರ ಚೀಟಿಗಳಲ್ಲಿ ಏನೇ ತಿದ್ದುಪಡಿ ಇದ್ದರೂ ಮಾಡಿಸಿಕೊಳ್ಳಬಹುದು. ಬೆಳಗ್ಗೆ 10ರಿಂದ ಸಂಜೆ 5 ಗಂಟೆಯವರೆಗೂ ಪಡಿತರ ಚೀಟಿ ತಿದ್ದುಪಡಿಗೆ ಅರ್ಜಿ ಸಲ್ಲಿಕೆ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಪ್ರಮುಖ ಸೂಚನೆಗಳು:
ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು.

ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top