ವಿದ್ಯಾರ್ಥಿವೇತನ 10,000/- ಗ್ರಾಮ ಪಂಚಾಯಿತಿ ಯಿಂದ ವಿದ್ಯಾರ್ಥಿಗಳಿಗೆ ಲಭ್ಯ 2026 – gram panchayat scholarship 2026

Spread the love

ಪ್ರಿಯ ವಿದ್ಯಾರ್ಥಿಗಳೇ,,, ನಿಮ್ಮ ಊರಿನ ಗ್ರಾಮ ಪಂಚಾಯಿತಿಯಿಂದ ನಿಮ್ಮ ಶಿಕ್ಷಣಕ್ಕೆ 2026ನೇ ಸಾಲಿನಲ್ಲಿ ಸಿಗುತ್ತಿದೆ ಬರೋಬ್ಬರಿ ₹10,000/- ವಿದ್ಯಾರ್ಥಿ ವೇತನ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸರ್ಕಾರ ಆಯಾ ಊರಿನ ಗ್ರಾಮ ಪಂಚಾಯಿತಿಯ ಮೂಲಕ ಮಕ್ಕಳ ವಿದ್ಯಾಭ್ಯಾಸವನ್ನು ಪ್ರೋತ್ಸಾಹಿಸಲು ಧಾವಿಸಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ನಿಗದಿಪಡಿಸಲಾದ ಅಂತಿಮ ದಿನಾಂಕದೊಳಗೆ ಅರ್ಜಿಯನ್ನ ಸಲ್ಲಿಸಿದಲ್ಲಿ ಮಾತ್ರ ಈ ಸ್ಕಾಲರ್ಶಿಪ್ ಮೊತ್ತವನ್ನ ನಿಮ್ಮದಾಗಿಸಿಕೊಳ್ಳಬಹುದು.

WhatsApp Group Join Now
Telegram Group Join Now

ವಿದ್ಯಾರ್ಥಿ ವೇತನದ ಕಿರು ಪರಿಚಯ:-

ಸ್ಕಾಲರ್ಶಿಪ್ ಹೆಸರುಗ್ರಾಮ ಪಂಚಾಯಿತಿ ಮಟ್ಟದಲ್ಲಿ ನೀಡುವ ಸ್ಥಳೀಯ ಸಹಾಯಧನ.
ಅರ್ಹ ವಿದ್ಯಾರ್ಥಿಗಳು8th to 10th ಮತ್ತು PUC (1ನೇ ಮತ್ತು 2ನೇ ವರ್ಷ),
ಡಿಗ್ರಿ, ಪೋಸ್ಟ್ ಗ್ರ್ಯಾಜುಯೇಷನ್, ಡಿಪ್ಲೊಮಾ / ITI / ಪಾಲಿಟೆಕ್ನಿಕ್ / ಇಂಜಿನಿಯರಿಂಗ್ / ನರ್ಸಿಂಗ್ ಇತ್ಯಾದಿ
ರಾಜ್ಯಕರ್ನಾಟಕ ಗ್ರಾಮೀಣ ಭಾಗದ ಯಲ್ಲ ಮಕ್ಕಳು ಅರ್ಜಿ ಸಲ್ಲಿಸಬಹುದು
ಪ್ರೋತ್ಸಾಹ ಧನದ ಮೊತ್ತ₹10,000/-
ಅರ್ಜಿ ಸಲ್ಲಿಸುವುದು ಹೇಗೆವಿದ್ಯಾರ್ಥಿಗಳು ಆನ್ಲೈನ್ ಮತ್ತು ಆಫ್ಲೈನ್ ಮುಖಾಂತರ ಅರ್ಜಿಯನ್ನು ಸಲ್ಲಿಸಿ

Gram Panchayat Scholarship 2026 In Kannada

ಸರ್ಕಾರವು ಈ ವೇತನವನ್ನು ನೇರವಾಗಿ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ (DBT) ಮೂಲಕ ವರ್ಗಾವಣೆ ಮಾಡಲಾಗುತ್ತದೆ. ಹಾಗಾಗಿ ವಿದ್ಯಾರ್ಥಿ ಮಿತ್ರರೇ ಈ ಪ್ರೋತ್ಸಹಧನ ಬಗ್ಗೆ ಯಾವುದೇ ಗೊಂದಲ ನಿಮಗೆ ಬೇಡ ಹಾಗೆ “ಪೋಷಕರು ನಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಇಷ್ಟು ಫೀಸ್ ಕಟ್ಟಲು ಹಣವನ್ನ ಎಲ್ಲಿ ತರುವುದು ಎನ್ನುವ ಚಿಂತೆಗೆ ಇದೇ ತಕ್ಷಣ ಗುಡ್ ಬಾಯ್ ಹೇಳಲೇ ಬೇಕು”!

ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಕೆಲವೊಂದು ಅರ್ಹತೆ ಹೊಂದಿರುವ ವಿದ್ಯಾರ್ಥಿಗಳು ಆನ್ಲೈನ್ ಮತ್ತು ಆಫ್ಲೈನ್ 2 ರೀತಿಯಲ್ಲೂ ಅರ್ಜಿಯನ್ನು ಸಲ್ಲಿಸುವ ಅವಕಾಶವನ್ನು ಸರ್ಕಾರ ಮಾಡಿಕೊಟ್ಟಿದೆ.

ಈ ಸ್ಕಾಲರ್ಷಿಪ್ನ ಲಾಭ ಪಡೆಯಲು ನಾವು ಅರ್ಹರೆ ? ನಿಮ್ಮ ಪ್ರಶ್ನೆಗೆ ಉತ್ತರ ಹೀಗಿದೆ :

ವಿದ್ಯಾರ್ಥಿಗಳೇ,,, ನೀವು ಈ ಕೆಳಗಿನ ಕೊಡಲಾದ ಅರ್ಹತೆಗಳು ನಿಮ್ಮಲ್ಲಿದ್ದರೆ ಈ ಪ್ರೋತ್ಸಾಹ ಧನಕ್ಕೆ ಅರ್ಜಿಯನ್ನ ಸಲ್ಲಿಸಬಹುದು.

  • ವಿದ್ಯಾರ್ಥಿಗಳು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಗ್ರಾಮೀಣ ಪ್ರದೇಶದಲ್ಲಿರಬೇಕು
  • 7ನೇ ತರಗತಿ ಒಳಗಿನ ಯಾವುದೇ ವಿದ್ಯಾರ್ಥಿಗಳಿಗೂ ಈ ಪ್ರೋತ್ಸಾಹ ಧನ ಸಿಗುವುದಿಲ್ಲ. ಬದಲಾಗಿ “8ನೇ ತರಗತಿ ಮೇಲ್ಪಟ್ಟ ಎಲ್ಲಾ ವಿದ್ಯಾರ್ಥಿಗಳಿಗೂ ಹಾಗೆ ಪಿಯುಸಿ, ಯಾವುದೇ ಪದವಿ, ಡಿಪ್ಲೋಮಾ”, ಸ್ನಾತಕೋತ್ತರ ಪದವಿ ಓದುತ್ತಿರಿವ ಎಲ್ಲಾ ವಿದ್ಯಾರ್ಥಿಗಳು ಕೂಡ ನಿಮ್ಮ ಊರಿನ ಗ್ರಾಮ ಪಂಚಾಯಿತಿಯಿಂದ ಈ ಸ್ಕಾಲರ್ಶಿಪ್ ಮೊತ್ತವನ್ನ ಪಡೆಯಬಹುದು.
  • ಕುಟುಂಬದ ವಾರ್ಷಿಕ ಆದಾಯವು 2 ಲಕ್ಷದಿಂದ 2.5 ಲಕ್ಷದ ಒಳಗೆ ಇರಬೇಕು.
  • ವಿದ್ಯಾರ್ಥಿಗಳು ಹಿಂದಿನ ಶೈಕ್ಷಣಿಕ ವರ್ಷದಲ್ಲಿ ತೇರ್ಗಡೆ ಹೊಂದಿರಬೇಕು ಹಾಗೆಯೇ ಕನಿಷ್ಠ 50% ಅಂಕವನ್ನ ಗಳಿಸಿರಬೇಕು.

ಗ್ರಾಮ ಪಂಚಾಯಿತಿ ವಿದ್ಯಾರ್ಥಿ ವೇತನ ಯೋಜನೆ 2026

ಇಂಥ ಗೋಲ್ಡನ್ ಆಪರ್ಚುನಿಟಿಯನ್ನು ಯಾವುದೇ ವಿದ್ಯಾರ್ಥಿಗಳು ಮಿಸ್ ಮಾಡಿಕೊಳ್ಳಬೇಡಿ ಇದೇ ತಕ್ಷಣ ಅರ್ಜಿಯನ್ನು ಸಲ್ಲಿಸಲು ಕೆಳಗೆ ಕೊಡಲಾದ ದಾಖಲೆಗಳನ್ನು ಸಿದ್ಧಪಡಿಸಿ ಅರ್ಜಿಯನ್ನು ಸಲ್ಲಿಸಿ.

ಯೋಜನೆಯ ಪರಿಣಾಮ :-

  • ಮಕ್ಕಳ ತಂದೆ ತಾಯಿಗೆ ಈ ಯೋಜನೆಯಿಂದ ಈ ಪ್ರೋತ್ಸಾಹ ಧನದಿಂದ ಆರ್ಥಿಕ ಹೊರೆ ದೊಡ್ಡಮಟ್ಟದಲ್ಲಿ ತಮ್ಮ ಮಕ್ಕಳನ್ನು ಉನ್ನತ ಶಿಕ್ಷಣಕ್ಕೆ ಕೊಂಡೊಯ್ಯಲು ಪ್ರೋತ್ಸಾಹಿಸುತ್ತದೆ.
  • ಮಕ್ಕಳಲ್ಲಿ ನಾನೇ ನನ್ನ ತರಗತಿಯಲ್ಲಿ ಟಾಪರ್(ರಾಂಕಿಂಗ್) ಆಗಬೇಕೆನ್ನುವ ಹಂಬಲವನ್ನ ಆಗಬೇಕು ಎನ್ನುವ ಹಂಬಲವನ್ನ ಹೆಚ್ಚಿಸುತ್ತದೆ.
  • ಈ ಒಂದು ಪ್ರೋತ್ಸಾಹ ಧನದಿಂದ ಗ್ರಾಮೀಣ ಭಾಗದ ಹೆಣ್ಣು ಮಕ್ಕಳು ಇತ್ತೀಚಿನ ದಿನಗಳಲ್ಲಿ ತುಂಬಾನೇ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಇಂತ ಸಂದರ್ಭದಲ್ಲಿ ಕರ್ನಾಟಕ ರಾಜ್ಯದಲ್ಲಿನ ತಮ್ಮ ಉನ್ನತ ಶಿಕ್ಷಣವನ್ನು ಮುಗಿಸಿ ದೇಶ – ವಿದೇಶದಲ್ಲಿ ತಮ್ಮ ಹೆಸರಿನ ಜೊತೆಗೆ ತಮ್ಮ ದೇಶದ ಹೆಸರನ್ನು ಕೂಡ ಅಗ್ರಸ್ಥಾನಕ್ಕೆ ಕೊಂಡೊಯ್ಯುತ್ತಾರೆ.
  • ಗ್ರಾಮ ಪಂಚಾಯಿತಿಗಳು ವಿದ್ಯಾರ್ಥಿಗಳಿಗೆ ಇಂತಹ ಒಂದು ಅತ್ಯುತ್ತಮ ಸ್ಕಾಲರ್ಶಿಪ್ ನ ವಿತರಣೆ ಮಾಡುವುದರಿಂದ ಗ್ರಾಮೀಣ ಭಾಗದ ಮೂಲೆ ಮೂಲೆಯಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಯು ಬೆಳೆಯುವುದರ ಜೊತೆಗೆ ತಮ್ಮ ಗ್ರಾಮವು ಕೂಡ ಅಭಿವೃದ್ಧಿಯಲ್ಲಿ ಮೇಲುಗೈ ಸಾಧಿಸುತ್ತಾ ಹೋಗುತ್ತದೆ.
  • ವಿಶೇಷವಾಗಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಈ ಒಂದು ಸ್ಕಾಲರ್ಶಿಪ್ ತಲುಪುವುದರಿಂದ ಸಮಾಜದ ಎಲ್ಲಾ ಮಕ್ಕಳು ಸ್ಥಿರವಾಗಿ ಸಮಾನವಾದ ಶಿಕ್ಷಣವನ್ನು ಪಡೆದುಕೊಳ್ಳಬಹುದು.

ವಿದ್ಯಾರ್ಹತೆ :-

  • 8th to 10th ಮತ್ತು PUC (1ನೇ ಮತ್ತು 2ನೇ ವರ್ಷ),
  • ಡಿಗ್ರಿ, ಪೋಸ್ಟ್ ಗ್ರ್ಯಾಜುಯೇಷನ್, ಡಿಪ್ಲೊಮಾ / ITI / ಪಾಲಿಟೆಕ್ನಿಕ್ / ಇಂಜಿನಿಯರಿಂಗ್ / ನರ್ಸಿಂಗ್ ಇತ್ಯಾದಿ ವಿದ್ಯಾರ್ಥಿಗಳು ಅರ್ಜಿಯನ್ನ ಸಲ್ಲಿಸಬಹುದಾಗಿದೆ.

ವಿದ್ಯಾರ್ಥಿವೇತನದ ಪ್ರಯೋಜನಗಳು:-

ಈ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾದ ಫೆಲೊಗಳು ತಮ್ಮ ಶೈಕ್ಷಣಿಕ ಕೋರ್ಸಿನ ಪೂರ್ಣ ಅವಧಿಗೆ ವಾರ್ಷಿಕವಾಗಿ 30,000 ವರೆಗೆ ವಿದ್ಯಾರ್ಥಿ ವೇತನವನ್ನು ಪಡೆಯುತ್ತಾರೆ.

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು:-

ವಿದ್ಯಾರ್ಥಿಗಳು ಈ ಒಂದು ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸುವ ಮೊದಲು ಈ ಅಗತ್ಯ ದಾಖಲೆಗಳನ್ನು ಸಿದ್ಧಪಡಿಸಿಟ್ಟುಕೊಳ್ಳುವುದು ಒಳ್ಳೆಯದು.

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಶಾಲೆ/ಕಾಲೇಜಿನ ಬೋನಾಫೈಡ್ / ದಾಖಲಾತಿ ಪ್ರಮಾಣಪತ್ರ
  • ಬ್ಯಾಂಕ್ ಖಾತೆ ಪಾಸ್‌ಬುಕ್ (ಆಧಾರ್ ಲಿಂಕ್ ಅಗತ್ಯ)
  • ಆದಾಯ ಪ್ರಮಾಣಪತ್ರ
  • 2 ಪಾಸ್‌ಪೋರ್ಟ್ ಗಾತ್ರದ ಫೋಟೋಗಳು
  • ಹಿಂದಿನ ವರ್ಷದ ಮಾರ್ಕ್ಸ್ ಕಾರ್ಡ್
  • ವಾಸ ಪ್ರಮಾಣ ಪತ್ರ (Residence Certificate)

ನಾವು ಅರ್ಜಿ ಸಲ್ಲಿಸುವುದು ಹೇಗೆ ?

ವಿದ್ಯಾರ್ಥಿಗಳೇ ನೀವು ಅರ್ಜಿ ಸಲ್ಲಿಸಲು ಈ ಕೆಳಗಿನ ಪ್ರಮುಖ ಹಂತವನ್ನು ಸರಿಯಾಗಿ ಅನುಸರಿಸಬೇಕಾಗುತ್ತದೆ ಇಲ್ಲವಾದಲ್ಲಿ ನಿಮ್ಮ ಅಪ್ಲಿಕೇಶನ್ ರಿಜೆಕ್ಟ್ ಆಗುವ ಸಾಧ್ಯತೆ ಬಹಳಷ್ಟು ಇರುತ್ತದೆ. ಹಾಗೇನೆ ಸರ್ಕಾರ “ಎಜುಕೇಶನ್ ಫಾರ್ ಆಲ್” ಎನ್ನುವ ಮಾತನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಬೇಕೆನ್ನುವ ಉದ್ದೇಶದಿಂದ ಆನ್ಲೈನ್ ಹಾಗೆ ಆಫ್ಲೈನ್ ಅಪ್ಲಿಕೇಶನ್ ಮೂಲಕ ಗ್ರಾಮೀಣ ಭಾಗದ ಮಕ್ಕಳ ವಿದ್ಯಾಭ್ಯಾಸಕ್ಕೆ ಈ ಸ್ಕಾಲರ್ಶಿಪ್ ಅನ್ನ ಗ್ರಾಮ ಪಂಚಾಯಿತಿ ಮೂಲಕ ಕೊಡಲು ಅರ್ಜಿಯನ್ನ ಪ್ರಾರಂಭಿಸಿದೆ ವಿದ್ಯಾರ್ಥಿಗಳು ಕೆಳಗಿನ ಹಂತವನ್ನು ಅನುಸರಿಸುತ್ತ ಅಂತಿಮ ದಿನದೊಳಗಾಗಿ ಅರ್ಜಿಯನ್ನ ಸಲ್ಲಿತ ಸಲ್ಲಿಸಬೇಕಾಗುತ್ತದೆ.

ಆಯ್ಕೆಯ ಮಾನದಂಡಗಳು:-

ಅರ್ಜಿ ಸಲ್ಲಿಸಿದ ಎಲ್ಲಾ ವಿದ್ಯಾರ್ಥಿಗಳ ಅರ್ಹತೆಯನ್ನು ಪರಿಶೀಲನೆ ನಡೆಸಿ ನಂತರದಲ್ಲಿ ಸ್ಕಾಲರ್ಶಿಪ್ ಹಣವನ್ನು ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ನೇರವಾಗಿ ಜಮಾ ಮಾಡಲಾಗುತ್ತದೆ

ಆನ್ಲೈನ್ನಲ್ಲಿ ನಿಮ್ಮ ಫೋನ್ ಮುಕಾಂತರ ಅರ್ಜಿ ಸಲ್ಲಿಸುವ ವಿಧಾನ :

  • ಮೊದಲು ನಿಮ್ಮ ಫೋನ್ ಮೂಲಕ ಅರ್ಜಿ ಸಲ್ಲಿಸಲು ಆಧಾರ್ ಕಾರ್ಡ್, ಕಾಲೇಜು ದೃಢೀಕರಣ ಪತ್ರ, ಹಳೆಯ ಅಂಕಪಟ್ಟಿ, ಬ್ಯಾಂಕ್ ಪಾಸ್ ಬುಕ್, ಇವುಗಳ ಫೋಟೋ ತೆಗೆದಿಟ್ಟುಕೊಳ್ಳಿ.
  • ನಿಮ್ಮ ಮೊಬೈಲ್ ಕ್ರೋಮ್ ಬ್ರೌಸರ್ ನಲ್ಲಿ ಸೇವಾ ಸಿಂಧು ವೆಬ್ ಸೈಟ್ ಗೆ ಹೋಗಿ ಬ್ರೌಸರ್ ನ ಬಲಭಾಗದಲ್ಲಿ ಮೂರು ಡಾಟ್ ಇರುತ್ತವೆ ಅದರ ಮೇಲೆ ಪ್ರೆಸ್ ಮಾಡಿ “Desktop Site” ಆನ್ ಮಾಡಿ.
  • ನಂತರ ನಿಮ್ಮ ಸರಿಯಾಗಿರುವಂತಹ ಮೊಬೈಲ್ ನಂಬರ್ ಹಾಕಿ ಓಟಿಪಿ ಬರುತ್ತದೆ ಅದನ್ನು ಸರಿಯಾಗಿ ಹಾಕಿ ಲಾಗಿನ್ ಮಾಡಿಕೊಳ್ಳಿ ಹಾಗೆ ಅಲ್ಲಿ “Apply for Service” ಕ್ಲಿಕ್ ಮಾಡಿ, ಸರ್ಚ್ ಬಾಕ್ಸ್‌ನಲ್ಲಿ “Incentive” ಎಂದು ಟೈಪ್ ಮಾಡಿ.
    ಓಪನ್ ಆದ ಅರ್ಜಿಯಲ್ಲಿ ನಿಮ್ಮ ಹೆಸರು, ಕಾಲೇಜು, ಬ್ಯಾಂಕ್ ವಿವರಗಳನ್ನು ಭರ್ತಿ ಮಾಡಿ ಹಾಗೇನೆ ನೀವು ತೆಗೆದುಕೊಂಡ ಫೋಟೋವನ್ನು ಅಪ್ಲೋಡ್ ಮಾಡಿ. ಕೊನೆಯಲ್ಲಿ ಸಬ್ಮಿಟ್ ಬಟನ್ ಇರುತ್ತದೆ ಕೆಳಗೆ ಪ್ರೆಸ್ ಮಾಡಿ ಮೊಬೈಲ್ ಗೆ ಬರುವಂತಹ ಅರ್ಜಿ ಸಂಖ್ಯೆಯನ್ನು ಸ್ಕ್ರೀನ್ಶಾಟ್ ತೆಗೆದಿಟ್ಟುಕೊಳ್ಳಿ.

ಆಫ್ ಲೈನ್ ಅರ್ಜಿ ಸಲ್ಲಿಸುವ ವಿಧಾನ :

ವಿದ್ಯಾರ್ಥಿಗಳೇ 2026 ರಲ್ಲಿ ಗ್ರಾಮ ಪಂಚಾಯಿತಿಯ ₹10,000/- ವಿದ್ಯಾರ್ಥಿ ವೇತನಕ್ಕಾಗಿ ಆಫ್ ಲೈನ್ನಲ್ಲಿ ಅರ್ಜಿ ಸಲ್ಲಿಸಲು ನೀವು ಬಯಸಿದರೆ ಈ ಕೆಳಗಿನ ಹಂತವನ್ನು ಫಾಲೋ ಮಾಡಿ.

  • ನಿಮ್ಮ ಊರಿನ ಗ್ರಾಮ ಪಂಚಾಯಿತಿ ಕಚೇರಿಗೆ ಮೊದಲು ಭೇಟಿ ನೀಡಿ ಅಥವಾ ಅಲ್ಲಿನ ಬಾಪೂಜಿ ಸೇವಾ ಕೇಂದ್ರಕ್ಕೆ ಭೇಟಿನೀಡಿ.
  • ಗ್ರಾಮ ಪಂಚಾಯಿತಿಯಲ್ಲಿರುವ PDO ಅಥವಾ ಅಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳ ಬಳಿ ವಿದ್ಯಾರ್ಥಿಗಳಿಗೆ ಸಿಗುವ ಶೈಕ್ಷಣಿಕ ಪ್ರೋತ್ಸಾಹ ಧನಕ್ಕೆ ಅರ್ಜಿ ಫಾರಂ ಅನ್ನ ಕೇಳಿ ಪಡೆದುಕೊಳ್ಳಿ.
  • ನಂತರ ವಿದ್ಯಾರ್ಥಿಯ ಹೆಸರು, ತಂದೆ – ತಾಯಿಯ ಹೆಸರು, ಜನ್ಮ ದಿನಾಂಕ, ವಿಳಾತ, ಪ್ರಸ್ತುತ ಓದುತ್ತಿರುವ ಕೋರ್ಸ್ ಮತ್ತು ಕಾಲೇಜಿನ ವಿವರ, ಬ್ಯಾಂಕ್ ಖಾತೆಯ ವಿವರಗಳು, ಹೀಗೆ ಕೇಳಲಾದ ಎಲ್ಲಾ ದಾಖಲೆಗಳನ್ನು ಸರಿಯಾಗಿ ಆ ಒಂದು ಫಾರಂನಲ್ಲಿ ಭರ್ತಿ ಮಾಡಬೇಕಾಗುತ್ತದೆ.
  • ಹಾಗೆಯೇ ಪ್ರಸ್ತುತ ಶಾಲಾ ಅಥವಾ ಕಾಲೇಜಿನಲ್ಲಿ ನೀವು ಓದುತ್ತಿರುವುದಕ್ಕೆ ಪ್ರಾಂಶುಪಾಲರಿಂದ ಪಡೆದ “ಸ್ಟಡಿ ಸರ್ಟಿಫಿಕೇಟ್” ಹಾಗೆ ಕಳೆದೆ ಸಾಲಿನ ಅಂಕಪಟ್ಟಿ,ಇತ್ತೀಚಿನ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ರೇಷನ್ ಕಾರ್ಡ್, ಇವುಗಳ ಪ್ರತಿಯನ್ನು ನೀವು ಲಗತ್ತಿಸಬೇಕಾಗುತ್ತದೆ.
  • ನಿಮ್ಮ ಅರ್ಜಿ ಸಂಪೂರ್ಣವಾಗಿ ರೆಡಿಯಾದ ನಂತರ ನೀವು ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಈ ಫಾರಂ ಅನ್ನ ಸಲ್ಲಿಸಿ.

ಪ್ರಮುಖ ಸೂಚನೆಗಳು:
ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು.

ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top