ರೂ 1,00000/- ಲಕ್ಷ 90% ರಷ್ಟು ಸಹಾಯಧನ ಆನ್ ಲೈನ್/ಆಫ್‌ಲೈನ್ ಮೂಲಕ ಅರ್ಜಿ 2026 – Farmers Government Subsidy Scheme 2026

Spread the love

ಆತ್ಮೀಯ ರೈತ ಬಾಂಧವರೇ,,, ಸರ್ಕಾರದಿಂದ ಈ ದಿನ ನಿಮಗೆ ಸಂತಸದ ಸುದ್ದಿ ಇದೆ. ಏನೆಂದರೆ ನೀವು ಈ ಜನವರಿ ತಿಂಗಳಲ್ಲಿ ನಿಮ್ಮ ನಿಮ್ಮ ತೋಟ, ಗದ್ದೆ, ಹೊಲ, ಜಮೀನಿಗೆ ಹಾಗೆ ನೀವು ಬೆಳೆದ ಬೆಳೆಗೆ ನೀರು ಹಾಯಿಸಲು ತಯಾರಿ ನಡೆಸುತ್ತಿದ್ದೀರಾ ಅಲ್ಲವೇ ? ಅಥವಾ ಮಾರುಕಟ್ಟೆಯಲ್ಲಿ ಡ್ರಿಪ್, ಪೈಪ್, ಪಂಸೆಟ್ ಮತ್ತು ರೈನ್ ಗನ್ ಹೀಗೆ ಇನ್ನು ಅನೇಕ ಉಪಕರಣಗಳನ್ನು ತರಲು ದುಡ್ಡು ಇಲ್ಲವೆಂದು ಚಿಂತಿಸುತ್ತಿದ್ದೀರಾ ?

WhatsApp Group Join Now
Telegram Group Join Now

ನಾನು ಒಬ್ಬ ರೈತ ಈ ಯೋಜನೆಗೆ ಅರ್ಜಿ ಸಲ್ಲಿಸಿದರೆ ನನಗೆ ಸಿಗು ಅನುಕೂಲ ಏನು ?

ನಿಮ್ಮ ಪ್ರಶ್ನೆ ಹೀಗಿದ್ದರೆ ಈ ಕೆಳಗೆ ಈ ಯೋಜನೆಯಿಂದ ನಿಮಗೆ ಸಿಗುವ ಅನುಕೂಲದ ಬಗ್ಗೆ ಸಂಪೂರ್ಣವಾಗಿ ಹಂತ ಹಂತವಾಗಿ ತಿಳಿಸಿ ಕೊಡುತ್ತಾ ಹೋಗುತ್ತೇನೆ ಬನ್ನಿ,,,,

  • ಸರ್ಕಾರದ ಕಡೆಯಿಂದ ನೀವು ಬೆಳೆದ ಬೆಳೆಗಳಿಗೆ ನೀರನ್ನ ಹಾಯಿಸಲು 75% ರಿಂದ 90% ರಷ್ಟು ಸಬ್ಸಿಡಿ! ಅತ್ಯಂತ ಕಡಿಮೆ ಖರ್ಚಿನಲ್ಲಿ ನೀರಾವರಿ ವ್ಯವಸ್ಥೆ ಜೊತೆಗೆ ನಿಮ್ಮ ಜಮೀನಿಗೆ ಸರ್ಕಾರದ ಆಸರೆ.
  • ರೈತರು ಮಾರುಕಟ್ಟೆಗಳಲ್ಲಿ ದಿನದಿಂದ ದಿನಕ್ಕೆ ಫೈಟ್, ಪಿಂಕ್ಲರ್, ಪಂಪ್ ಸೆಟ್, ಹೀಗೆ ಇನ್ನು ಅನೇಕ ಉಪಕರಣಗಳ ಮೇಲೆ ಬೆಲೆ ಹೆಚ್ಚುತ್ತಿರುವುದು ರೈತರಿಗೆ ಒಂದು ದೊಡ್ಡ ಸಂಕಷ್ಟವಾಗಿದೆ ಇದನ್ನ ಮನೆಗೊಂಡ ಸರ್ಕಾರ ರೈತರ ಕಷ್ಟ ಪರಿಹರಿಸಲು ಈ ಯೋಜನೆಗೆ ಇದೀಗ ಆನ್ಲೈನ್ ಅಪ್ಲಿಕೇಶನ್ ಆರಂಭಿಸಿದೆ.
  • ಈಗಾಗಲೇ ಈ ಯೋಜನೆಯಿಂದ ಲಾಭ ಪಡೆಯುತ್ತಿರುವ ರೈತರು ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವಳಿಯ ಜೊತೆಗೆ ಆದಾಯವನ್ನು ಬಾರಿಸಿಕೊಳ್ಳುತಿದ್ದರೆ.
  • ಕೆಲವು ರೈತರು ಹಣದ ಕೊರತೆಯಿಂದಾಗಿ ಮಾರುಕಟ್ಟೆಯಲ್ಲಿ ಖರೀದಿ ಮಾಡುವ ಯಂತ್ರೋಪಕರಣಗಳನ್ನು ಕಡಿಮೆ ಪ್ರಮಾಣದಲ್ಲಿ ಖರೀದಿ ಮಾಡುತ್ತಾರೆ ಈ ಕಾರಣದಿಂದ ತಾವು ಬೆಳೆದ ಬೆಳೆಗೆ ನೀರು ಸರಿಯಾದ ಪ್ರಮಾಣದಲ್ಲಿ ಎಲ್ಲ ಬೆಳೆಗಳಿಗೆ ಹೋಗಿ ತಲುಪುವುದಿಲ್ಲ ಆದರೆ ಸರ್ಕಾರದ ಯೋಜನೆಯಿಂದ ರೈತರಿಗೆ ಅನುಕೂಲವಾಗಿ ಎಲ್ಲಾ ಬೆಳೆಗಳಿಗೂ ಸರಿಯಾದ ಪ್ರಮಾಣದಲ್ಲಿ ನೀರು ಹಾದು ಹೋಗುತ್ತದೆ.
  • ಹೀಗೆ ನೋಡುತ್ತಾ ಹೋದರೆ ರೈತರಿಗೆ ಈ ಯೋಜನೆಯಿಂದ ಸಿಗುವ ಅನುಕೂಲಗಳು ಅತಿ ಹೆಚ್ಚು ಹಾಗಾಗಿ ಈ ಯೋಜನೆಯ ರೈತರು ಸದುಪಯೋಗಪಡಿಸಿಕೊಳ್ಳಿ.

ಆಯಾ ವರ್ಗದವರು ಎಷ್ಟೆಷ್ಟು ಸಬ್ಸಿಡಿಯನ್ನು ಪಡೆಯಬಹುದು ?

ಸರ್ಕಾರ ಪ್ರತಿಯೊಂದು ಯೋಜನೆಗಳಲ್ಲಿಯೂ ಒಂದನ್ನು ವರ್ಗಕ್ಕೆ ತಕ್ಕಂತೆ ಒಂದೊಂದು ರೀತಿಯಲ್ಲಿ ಸಬ್ಸಿಡಿ ಯನ್ನ ನೀಡುತ್ತಾ ಬಂದಿದೆ. ಅದೇ ರೀತಿ ಈ ಒಂದು ಯೋಜನೆಗೂ ಸಹ ವರ್ಗಕ್ಕೆ ತಕ್ಕಂತೆ ಸಬ್ಸಿಡಿಯನ್ನ ಸಬ್ಸಿಡಿಯನ್ನು ನೀಡಿದೆ ನೋಡುತ್ತಾ ಹೋಗೋಣ ಬನ್ನಿ.

1. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (SC/ST)
  • ಸರ್ಕಾರದ ಯೋಜನೆಗಳಲ್ಲಿ ಯಾರಿಗೂ ಸಿಗದೇ ಇರುವಂತಹ ಮೀಸಲಾತಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಸಿಗುತ್ತದೆ ಎನ್ನುವುದು ನಮಗೆ ನಿಮಗೆ ಗೊತ್ತೇ ಇದೆ. ಈ ಯೋಜನೆ ಮೂಲಕ ಇವರಿಗೆ ಸಿಗುವ ಸಬ್ಸಿಡಿ ಸುಮಾರು 90% ಇಂದ 100% ವರೆಗೆ ಸಿಗುತ್ತದೆ.
  • ಇನ್ನು ವಿವರವಾಗಿ ತಿಳಿಯುವುದಾದರೆ ನೀವು SC/ST ವರ್ಗಕ್ಕೆ ಸೇರಿದರೆ ಸರ್ಕಾರದಿಂದ ಉಚಿತವಾಗಿಯೂ ಈ ಎಲ್ಲಾ ವ್ಯವಸ್ಥೆಗಳನ್ನ ನೀವು ನಿಮ್ಮ ಜಮೀನಿಗೆ ಅರ್ಜಿ ಸಲ್ಲಿಸುವ ಮುಕಾಂತರ ಅಳವಡಿಸಿಕೊಳ್ಳಬಹುದು ಅಥವಾ ಕೆಲವು ಸಂದರ್ಭ ದಲ್ಲಿ ಮಾತ್ರ ಸ್ವಲ್ಪ ಪ್ರಮಾಣದಲ್ಲಿ ಹಣವನ್ನ ತೋಟಗಾರಿಕೆ ಅಥವಾ ಕೃಷಿ ಇಲಾಖೆಗೆ ಹಣವನ್ನ ಪಾವತಿ ಮಾಡಬೇಕಾಗುತ್ತದೆ.

2. ಸಾಮಾನ್ಯ ವರ್ಗದ ಸಣ್ಣ ಮತ್ತು ಅತೀ ಸಣ್ಣ ರೈತರು

  • ಸರ್ಕಾರದಿಂದ ಸಾಮಾನ್ಯ ಹಾಗೆಯೇ ಅತಿ ಸಣ್ಣ ರೈತರಿಗೆ 90% ಸಬ್ಸಿಡಿಯಲ್ಲಿ ಈ ಯೋಜನೆಯ ಸಂಪೂರ್ಣ ಲಾಭ ದೊರೆಯುತ್ತದೆ.
  • ಇನ್ನು ಕಷ್ಟವಾಗಿ ತಿಳಿಯಲು ಬಯಸಿರಲಿ ಬಯಸುವಿರಾ ಹಾಗಿದ್ದರೆ ನೋಡಿ ನೀವು ಸಣ್ಣ ಮತ್ತು ಅತಿ ಸಣ್ಣ ರೈತರಾಗಿದ್ದರೆ ಅಂದರೆ ನಿಮ್ಮ ನಿಮ್ಮ ಜಮೀನು 5 ಎಕರೆ (2 ಹೆಕ್ಟೇರ್) ಒಳಗಿದ್ದರೆ ನಿಮಗೆ ಸಿಗುವುದು 90% ಸಬ್ಸಿಡಿ.

3. ಸಾಮಾನ್ಯ ವರ್ಗದ ಇತರ ರೈತರು ?

  • ನಿಮ್ಮದು 5 ಎಕರೆಗಿಂತ ಹೆಚ್ಚಿನ ಜಮೀನು ಇದ್ದರೆ ಸಬ್ಸಿಡಿ 75% ಈ ಯೋಜನೆಯಿಂದ ಸಾಮಾನ್ಯ ವರ್ಗದ ರೈತರು ಪಡೆಯಬಹುದು.

ರೈತ ಬಂದವರೇ ನಿಮ್ಮಗೆ ಈ ಸಬ್ಸಿಡಿಯ ಬಗ್ಗೆ ಇನ್ನು ಹೆಚ್ಚಿನ ಮಾಹಿತಿ ಬೇಕಾದಲ್ಲಿ ಅಥವಾ ಅರ್ಜಿ ಸಲ್ಲಿಸಲು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ (RSK) ಅಥವಾ ಕರ್ನಾಟಕ ಕೃಷಿ ಇಲಾಖೆ ವೆಬ್‌ಸೈಟ್‌ಗೆ ಭೇಟಿ ನೀಡಿ.

Farmers Government Subsidy Scheme In Kannada 2026

ಯಾಕೆಂದರೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ನಿಮಗಂತಲೇ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಇದಕ್ಕೆ ಆನ್ಲೈನ್ ಹಾಗೆ ಆಫ್ಲೈನ್ ಅಪ್ಲಿಕೇಶನ್ ಇದೀಗ ಆರಂಭವಾಗಿದ್ದು ಕರ್ನಾಟಕ ರಾಜ್ಯದ ಎಲ್ಲಾ ರೈತರು ಕೂಡ ಅಂತಿಮ ದಿನದೊಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗುತ್ತದೆ.

ಇಂತಹ ಒಂದು ಯೋಜನೆಗಳಿಂದ ರೈತರು ತಾವು ಬೆಳೆಯುವಂತಹ ಬೆಳೆಗೆ ತಮ್ಮ ಸ್ವಂತ ದುಡ್ಡನ್ನ ಬಳಸದೆ ಸರ್ಕಾರದ ಇಂತಹ ಸಬ್ಸಿಡಿ ಮೂಲಕ ಹೆಚ್ಚಿನ ಇಳುವರಿಯ ಜೊತೆಗೆ ಲಾಭವನ್ನು ಪಡೆಯಬಹುದು. ಇತ್ತೀಚಿನ ದಿನಗಳಲ್ಲಿ ರೈತರ ಕಷ್ಟಗಳು ಬಹಳಷ್ಟು ಇವೆ.

ಹಾಗಾಗಿ ಇದೀಗ 2026ರಲ್ಲಿ “ರಾಜ್ಯ ಹಾಗೆ ಕೇಂದ್ರ ಸರ್ಕಾರ” ರೈತರ ಆರ್ಥಿಕ ಜೀವನ ಮಟ್ಟವನ್ನ ಸುಧಾರಿಸಲು ಮತ್ತು ಭಾರತದಂತ ಅತ್ಯುತ್ತಮ ದೇಶದಲ್ಲಿ ಕೃಷಿ ಚಟುವಟಿಕೆಯನ್ನ ಹೆಚ್ಚಿಸಬೇಕೆನ್ನುವ ಪ್ರಮುಖ ಉದ್ದೇಶದಿಂದ ಈ ಯೋಜನೆ ಮೂಲಕ 8 ಉಪಕರಣಗಳ ಮೇಲೆ ಸಬ್ಸಿಡಿ ಸಿಗುತ್ತದೆ.

ಸಾಮಾನ್ಯವಾಗಿ ರೈತರು ಇದನ್ನು ಗಮನಿಸಲೇಬೇಕು” ಯಾಕೆಂದರೆ ಈ ಜನವರಿ ತಿಂಗಳಲ್ಲಿ ಅಡಿಕೆ ಬೆಳೆ ರೈತರು ಕೊನೆ ಕೊಯ್ಲನ್ನ ಮುಗಿಸಿ ತಮ್ಮ ತೋಟಗಳಿಗೆ ಸ್ಪಿಂಕ್ಲರ್, ಡ್ರಿಪ್ ಮಾಡುತ್ತಿರುತ್ತಾರೆ ಹಾಗೆಯೇ ಕೆಲವರು ತಮ್ಮ ಜಮೀನಿನಲ್ಲಿ ಧಾನ್ಯದ ಕಾಳುಗಳ ಬಿತ್ತನೆ ಮಾಡಲು ಬಿತ್ತನೆಯನ್ನು ಮಾಡಲು ಆರಂಭಿಸಿರುತ್ತಾರೆ ಹಾಗೆಯೇ ಇನ್ನೂ ಕೆಲವು ರೈತರು ನಾಟಿಯನ್ನು ಶುರು ಮಾಡಿರುತ್ತಾರೆ ಅಂತವರಿಗೆ ಈ ಸಬ್ಸಿಡಿ ಇಂದ ಸಿಗುವ ಅನುಕೂಲತೆಗಳು ಹೆಚ್ಚಾಗಿರುತ್ತದೆ. ಹೀಗಾಗಿ ರೈತರು ಅಂತಿಮ ದಿನಾಂಕ ದೊಳಗಾಗಿ ಅರ್ಜಿಯನ್ನು ಸಲ್ಲಿಸಿದ ನಂತರ 15 ದಿನದೊಳಗೆ ಈ ಕೃಷಿ ಯಂತ್ರೋಪಕರಣಗಳನ್ನು ನೀವು ಕೃಷಿ ಇಲಾಖೆಯ ಮೂಲಕ ಪಡೆದುಕೊಳ್ಳಬಹುದು.

ಯೋಜನೆಯಿಂದ ಸಿಗುವ ಉಪಕರಣಗಳ ಪಟ್ಟಿ ಹೀಗಿವೆ :

  • ಲ್ಯಾಟರಲ್ ಪೈಪ್‌ಗಳು
  • ಇತರೆ ಫಿಟ್ಟಿಂಗ್‌ಗಳು
  • ಪಿವಿಸಿ ಪೈಪ್‌ಗಳು
  • ಡ್ರಿಪ್ಪರ್‌ಗಳು ಅಥವಾ ಎಮಿಟರ್‌ಗಳು
  • ಸಬ್-ಮೇನ್ ಪೈಪ್‌ಗಳು
  • ಪ್ರೆಶರ್ ಗೇಜ್
  • ವೆಂಚುರಿ ಅಥವಾ ಫರ್ಟಿಗೇಷನ್ ಟ್ಯಾಂಕ್
  • ಫ್ಲಶ್ ವಾಲ್ವ್
  • ಫಿಲ್ಟರ್ ಘಟಕ
  1. ಸ್ಕ್ರೀನ್ ಅಥವಾ ಡಿಸ್ಕ್ ಫಿಲ್ಟರ್
  2. ಸ್ಯಾಂಡ್ ಫಿಲ್ಟರ್

ಈ ಮೇಲೆ ಕೊಡಲಾದ ಎಲ್ಲಾ ಉಪಕರಣಗಳ ಮೇಲೆ ಯೋಜನೆ ಮೂಲಕ ಸಬ್ಸಿಡಿ ಸಿಗುವುದು ಗ್ಯಾರಂಟಿ.

ಅರ್ಜಿ ಸಲ್ಲಿಸುವ ವಿಧಾನ :

ಈ ಯೋಜನೆಗೆ ಅರ್ಜಿ ಸಲ್ಲಿಸುವ ರೈತ ಮಿತ್ರರಿಗೆ 2026ರಲ್ಲಿ ಈ ಹನಿ ಹನಿ ನೀರಾವರಿ ಯೋಜನೆಗೆ ಆನ್ಲೈನ್ ಮತ್ತು ಆಫ್ಲೈನ್ 2 ವಿಭಾಗದಲ್ಲೂ ಕೂಡ ಅರ್ಜಿಯನ್ನು ಸಲ್ಲಿಸಲು ಸರ್ಕಾರ ಅನುವು ಮಾಡಿಕೊಟ್ಟಿದೆ.

ನೀವು ಆಫ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಲು ಬಯಸುವಿರಾ ? ಹೇಗೆ ಅರ್ಜಿ ಸಲ್ಲಿಸಬೇಕು ಇಲ್ಲಿ ನೋಡಿ :
  • ಅಭ್ಯರ್ಥಿಗಳು ನಿಮ್ಮ ಹತ್ತಿರದ ವ್ಯಾಪ್ತಿಗೆ ಒಳಪಡುವ “ರೈತ ಸಂಪರ್ಕ ಕೇಂದ್ರ (RSK)  ಅಥವಾ ತಾಲೂಕು ತೋಟಗಾರಿಕೆ ಇಲಾಖೆ /ಕೃಷಿ ಇಲಾಖೆ ಕಚೇರಿಗೆ ಭೇಟಿ ನೀಡಿ
  • ನಂತರ ಅಲ್ಲಿ ಇರುವ ಅಧಿಕಾರಿಗಳ ಬಳಿ ನಿಮಗೆ ಬೇಕಾಗಿರುವ ಅಂದರೆ ಹನಿ ನೀರಾವರಿ ಯೋಜನೆ ಸಹಾಯಧನಕ್ಕಾಗಿ ಅರ್ಜಿ ನಮಗೆ ಬೇಕು ಎನ್ನುವುದನ್ನು ಅವರಿಗೆ ಮನವರಿಕೆ ಮಾಡಿ ಅರ್ಜಿಯನ್ನು ಮೊದಲು ಪಡೆಯಿರಿ.
  • ಪಡೆದುಕೊಂಡ ಅರ್ಜಿಯಲ್ಲಿ ಹೇಳಲಾದ ನಿಮ್ಮ ವೈಯಕ್ತಿಕ ವಿವರ ಜಮೀನಿನ ಸರ್ವೇ ನಂಬರ್ ಬೆಳೆಯುವ ಬೆಳೆಗಳು ಮತ್ತು ನೀರಿನ ಮೂಲದ ಮಾಹಿತಿಯನ್ನ ಸರಿಯಾಗಿ ರೈತರು ಭರ್ತಿ ಮಾಡಬೇಕು.
  • ಸರ್ಕಾರದಿಂದ ಮಾನ್ಯತೆ ಪಡೆದ ಹನಿ ನೀರಾವರಿ ಕಂಪನಿಗಳ ಪಟ್ಟಿಯಿಂದ ಒಂದು ಕಂಪನಿಯನ್ನು ಆಯ್ಕೆ ಮಾಡಿ. ಆ ಕಂಪನಿಯ ಪ್ರತಿನಿಧಿಯನ್ನು ಹೊಲಕ್ಕೆ ಕರೆಸಿ. “ಅವರು ನೀಡುವ ವೆಚ್ಚದ ಅಂದಾಜು ಪಟ್ಟಿ (Quotation) ಮತ್ತು ವಿನ್ಯಾಸ ನಕ್ಷೆ (Design Map) ಅನ್ನು ಅರ್ಜಿಗೆ ಲಗತ್ತಿಸಿ“.

ಪ್ರಮುಖ ದಾಖಲೆಗಳು :

ನೀವು ಈ ಯೋಚನೆಯನ್ನು ಸಂಪೂರ್ಣವಾಗಿ ಓದಿನ ನಂತರ ಅರ್ಜಿಯನ್ನು ಸಲ್ಲಿಸಿದರೆ ಬಯಸಿದರೆ ಅರ್ಜಿಯನ್ನು ಸಲ್ಲಿಸಬೇಕೆಂದು ಬಯಸಿದರೆ ಈ ಕೆಳಗಿನ ಅಗತ್ಯ ದಾಖಲೆಗಳು ನಿಮ್ಮಲ್ಲಿ ಕಡ್ಡಾಯವಾಗಿ ಇರಲೇಬೇಕಾಗುತ್ತದೆ ಹಾಗಿದ್ದಲ್ಲಿ ಮಾತ್ರ ಈ ಯೋಚನೆಯ ಸಂಪೂರ್ಣ ಲಾಭವನ್ನು ನೀವು ನಿಮ್ಮದಾಗಿಸಿಕೊಳ್ಳಬಹುದು.

  • ಆಧಾರ್ ಕಾರ್ಡ್
  • ಫ್ರೂಟ್ಸ್ ಐಡಿ (FRUITS ID)
  • ಜಮೀನು ಪಹಣಿ
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಚೆಕ್ ಬಂದಿ
  • ಜಾತಿ ಪ್ರಮಾಣ ಪತ್ರ
  • ರೈತರ ಎರಡು ಇತ್ತೀಚಿನ ಭಾವಚಿತ್ರ
  • ನೀರಿನ ಮೂಲದ ದೃಢೀಕರಣ
  • ಕಂಪನಿಯ ಕೊಟೇಶನ್

ನೀವು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಬಯಸಿದರೆ ಈ ವಿಧಾನವನ್ನು ಅನುಸರಿಸಿ :

ಕರ್ನಾಟಕದಲ್ಲಿ ಯಾವುದೇ ಕೃಷಿ ಸಂಬಂಧಿತ ಸೌಲಭ್ಯ ಪಡೆಯಲು FRUITS ID ಕಡ್ಡಾಯವಾಗಿರೆಯುತ್ತದೆ.

  • ಮೊದಲು ಕರ್ನಾಟಕ ಸರ್ಕಾರದ ಅಧಿಕೃತ ಸೇವಾ ಸಿಂಧು ಅಥವಾ ಫ್ರೂಟ್ಸ್ (FRUITS)  ಪೋರ್ಟಲ್ ಗೆ ಭೇಟಿ ನೀಡಿ.
  • ನಿಮ್ಮ ಮೊಬೈಲ್ ನಂಬರ್ ಅಥವಾ ಫ್ರೂಟ್ಸ್ (FRUITS) ಬಳಸಿ ಲಾಗಿನ್ ಆಗಿ. (ಫ್ರೂಟ್ಸ್ ಐಡಿ ಇಲ್ಲದಿದ್ದರೆ ಆಧಾರ್ ಕಾರ್ಡ್ ಬಳಸಿ ಹೊಸದಾಗಿ ನಿಮ್ಮನ್ನು ನೀವು ನೋಂದಾಯಿಸಿಕೊಳ್ಳಿ)
  • ನೀವು ತೆಗೆದುಕೊಂಡ ಅರ್ಜಿಯಲ್ಲಿ ಅನೇಕ ಯೋಜನೆಗಳ ಪಟ್ಟಿ ಒಂದು ಸಿದ್ಧವಾಗಿರುತ್ತದೆ ಅಲ್ಲಿ ನೀವು ಹನಿ ನೀರಾವರಿ ಯೋಜನೆಗೆ ಅರ್ಜಿ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ.
  • ನಂತರ ನಿಮ್ಮ ಜಮೀನಿನ ಸರ್ವೆ ನಂಬರ್ ಜಿಲ್ಲೆ ತಾಲೂಕು ಮತ್ತು ಗ್ರಾಮದ ವಿವರವನ್ನು ಆಯ್ಕೆ ಮಾಡಿಕೊಳ್ಳಿ. ಹಾಗೆಯೇ ಪಹಣಿ ಆಧಾರ್ ಕಾರ್ಡ್ ಮತ್ತು ಬ್ಯಾಂಕ್ ಪಾಸ್ ಬುಕ್ ನ ಫೋಟೋಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕಾಗುತ್ತದೆ.
  • ಸರ್ಕಾರಿ ಮಾನ್ಯತೆ ಪಡೆದ ಸಂಸ್ಥೆಗಳ ಪಟ್ಟಿಯಲ್ಲಿ ನಿಮಗೆ ಇಷ್ಟವಾದ ಕಂಪನಿಯೊಂದನ್ನು ಆಯ್ಕೆ ಮಾಡಿ ಕೊನೆಯದಾಗಿ ಎಲ್ಲಾ ವಿವರವನ್ನು ಒಮ್ಮೆ ಸರಿ ಇದೆಯೇ ಎಂದು ಪರಿಶೀಲಿಸಿ  ‘Submit’ ಬಟನ್ ಮೇಲೆ ಪ್ರೆಸ್ ಮಾಡಿ ಹಾಗೆ ಅರ್ಜಿ ಸಲ್ಲಿಸಿದ ನಂತರ ಬರುವ ಅರ್ಜಿ ಸಂಖ್ಯೆಯನ್ನು (Reference Number) ಸೇವ್ ಮಾಡಿಕೊಳ್ಳಿ.

ಪ್ರಮುಖ ಸೂಚನೆಗಳು:
ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು.

ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top