DHFWS Vijayanagara Recruitment 2026 – ವಿಜಯನಗರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ ನೇಮಕಾತಿ 2026

Spread the love

DHFWS Vijayanagara Recruitment 2026 : ರಾಷ್ಟ್ರೀಯ ಆರೋಗ್ಯ ಅಭಿಯಾನದ ವಿವಿಧ ರಾಷ್ಟ್ರೀಯ ಆರೋಗ್ಯ ಕಾರ್ಯಕ್ರಮಗಳಡಿಯಲ್ಲಿ ವಿಜಯನಗರ ಜಿಲ್ಲೆಯಲ್ಲಿ ಖಾಲಿ ಇರುವ ಅರವಳಿಕೆ ತಜ್ಞರು, ವೈದ್ಯಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು, ಆಡಿಯಾಲಜಿಸ್ಟ್ ಸೇರಿದಂತೆ ವಿವಿಧ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಶೈಕ್ಷಣಿಕ ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ದಿನಾಂಕ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

WhatsApp Group Join Now
Telegram Group Join Now

DHFWS Vijayanagara Recruitment 2026 : Details of Vacancies

ಹುದ್ದೆ :

ಅರವಳಿಕೆ ತಜ್ಞರು, ವೈದ್ಯಾಧಿಕಾರಿಗಳು, ಶುಶ್ರೂಷಣಾಧಿಕಾರಿಗಳು, ಪ್ರಯೋಗಶಾಲಾ ತಂತ್ರಜ್ಞರು, ಆಡಿಯಾಲಜಿಸ್ಟ್, ಆಪ್ಟೋಮೆಟ್ರಿಸ್ಟ್, ಸೈಕಾಲಜಿಸ್ಟ್, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಫಾರ್ಮಸಿ ಅಧಿಕಾರಿಗಳು, ಆರೋಗ್ಯ ನೀರಿಕ್ಷಣಾಧಿಕಾರಿಗಳು, ಫಿಸಿಯೋಥೆರಪಿಸ್ಟ್, ಎಕ್ಸರೇ ಟೆಕ್ನಿಷಿಯನ್, ಇನ್ಸೆಕ್ಟ್ ಕಲೆಕ್ಟರ್, ಬ್ಲಾಕ್ ಎಫಿಡೆಮಿಯಾಲಜಿಸ್ಟ್

ಖಾಲಿಯಿರುವ ಹುದ್ದೆಗಳ ಸಂಖ್ಯೆ :

ಒಟ್ಟು 61 ಹುದ್ದೆಗಳ ಭರ್ತಿಗೆ ಅರ್ಜಿಯನ್ನು ಕರೆಯಲಾಗಿದೆ.

ಹುದ್ದೆಹುದ್ದೆಗಳ ಸಂಖ್ಯೆ
ಅರವಳಿಕೆ ತಜ್ಞರು1
ವೈದ್ಯಾಧಿಕಾರಿಗಳು20
ಶುಶ್ರೂಷಣಾಧಿಕಾರಿಗಳು12
ಪ್ರಯೋಗಶಾಲಾ ತಂತ್ರಜ್ಞರು5
ಆಡಿಯಾಲಜಿಸ್ಟ್1
ಆಪ್ಟೋಮೆಟ್ರಿಸ್ಟ್1
ಸೈಕಾಲಜಿಸ್ಟ್1
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು8
ಫಾರ್ಮಸಿ ಅಧಿಕಾರಿಗಳು1

ವಯೋಮಾನ :

ಹುದ್ದೆವಯೋಮಾನ
ಅರವಳಿಕೆ ತಜ್ಞರುಗರಿಷ್ಠ 60 ವರ್ಷ
ವೈದ್ಯಾಧಿಕಾರಿಗಳುಗರಿಷ್ಠ 60 ವರ್ಷ
ಶುಶ್ರೂಷಣಾಧಿಕಾರಿಗಳುಗರಿಷ್ಠ 45 ವರ್ಷ
ಪ್ರಯೋಗಶಾಲಾ ತಂತ್ರಜ್ಞರುಗರಿಷ್ಠ 40 ವರ್ಷ
ಆಡಿಯಾಲಜಿಸ್ಟ್ಗರಿಷ್ಠ 45 ವರ್ಷ
ಆಪ್ಟೋಮೆಟ್ರಿಸ್ಟ್ಗರಿಷ್ಠ 45 ವರ್ಷ
ಸೈಕಾಲಜಿಸ್ಟ್ಗರಿಷ್ಠ 45 ವರ್ಷ
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳುಗರಿಷ್ಠ 40 ವರ್ಷ
ಫಾರ್ಮಸಿ ಅಧಿಕಾರಿಗಳುಗರಿಷ್ಠ 40 ವರ್ಷ
ಆರೋಗ್ಯ ನೀರಿಕ್ಷಣಾಧಿಕಾರಿಗಳುಗರಿಷ್ಠ 40 ವರ್ಷ
ಫಿಸಿಯೋಥೆರಪಿಸ್ಟ್ಗರಿಷ್ಠ 40 ವರ್ಷ
ಎಕ್ಸರೇ ಟೆಕ್ನಿಷಿಯನ್ಗರಿಷ್ಠ 45 ವರ್ಷ
ಇನ್ಸೆಕ್ಟ್ ಕಲೆಕ್ಟರ್ಗರಿಷ್ಠ 40 ವರ್ಷ
ಬ್ಲಾಕ್ ಎಫಿಡೆಮಿಯಾಲಜಿಸ್ಟ್ಗರಿಷ್ಠ 45 ವರ್ಷ

ಕರ್ತವ್ಯ ಸ್ಥಳ :

ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ವಿಜಯನಗರ ಜಿಲ್ಲೆ , ಕರ್ನಾಟಕದಲ್ಲಿ ಕೆಲಸ ನಿರ್ವಹಿಸಬೇಕು.

ಅರ್ಜಿ ಸಲ್ಲಿಕೆಯ ವಿಧಾನ :

ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್‌ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಕೊನೆಯದಾಗಿ, ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ) ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.

ಶೈಕ್ಷಣಿಕ ಅರ್ಹತೆ :

ಅರವಳಿಕೆ ತಜ್ಞರು –

ಎಂ.ಬಿ.ಬಿ.ಎಸ್, ಎಂ.ಡಿ/ ಡಿಎ (ಕಡ್ಡಾಯವಾಗಿ ಇಂಟರ್ನಸಿಪ್ ಪೂರೈಸಿರಬೇಕು. ಕೆ.ಎಂ.ಸಿಯ ನೋಂದಣಿಯನ್ನು ಹೊಂದಿರತಕ್ಕದ್ದು.

ವೈದ್ಯಾಧಿಕಾರಿಗಳು –

ಎಂ.ಬಿ.ಬಿ.ಎಸ್ ಪೂರ್ಣಗೊಳಿಸಿ ಕಡ್ಡಾಯವಾಗಿ ಇಂಟರ್ನಶಿಪ್ ಮುಗಿಸಿರಬೇಕು ಮತ್ತು ಕರ್ನಾಟಕ ಮೆಡಿಕಲ್ ಕೌನ್ಸಿಲ್ ನಲ್ಲಿ ನೊಂದಾಯಿತರಾಗಿ ಸ್ಥಳೀಯ ರಾಜ್ಯ ಭಾಷೆ ತಿಳಿದಿರಬೇಕು.

ಶುಶ್ರೂಷಣಾಧಿಕಾರಿಗಳು –

ಜಿ.ಎನ್.ಎಮ್ ಅಥವಾ ಬಿ.ಎಸ್.ಸಿ ನರ್ಸಿಂಗ್ ಪದವಿ ಹೊಂದಿರಬೇಕು. ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ಕಡ್ಡಾಯವಾಗಿ ನೋಂದಣಿಯಾಗಿರಬೇಕು.

ಪ್ರಯೋಗಶಾಲಾ ತಂತ್ರಜ್ಞರು –

ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆವೈದ್ಯಕೀಯ ಮಂಡಳಿಯು ನಡೆಸುವ ಪ್ರಯೋಗಶಾಲಾ ತಂತ್ರಜ್ಞತೆಯಲ್ಲಿ 3 ವರ್ಷದ ಡಿಪ್ಲೋಮಾದಲ್ಲಿ ಉತ್ತೀರ್ಣ ಹೊಂದಿರಬೇಕು.
ದ್ವಿತೀಯ ಪಿಯುಸಿಯಲ್ಲಿ ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಮತ್ತು ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯು ನಡೆಸುವ 2 ವರ್ಷಗಳ ಪ್ರಯೋಗಶಾಲಾ ತಂತ್ರಜ್ಞರ ತರಬೇತಿ ಪಡೆದಿರಬೇಕು.
ಪ್ರಯೋಗಶಾಲಾ ತಂತ್ರಜ್ಞರು ಕಡ್ಡಾಯವಾಗಿ ಕರ್ನಾಟಕ ರಾಜ್ಯ ಅರೆವೈದ್ಯಕೀಯ ಮಂಡಳಿಯ ನೋಂದಣಿ ಹೊಂದಿರಬೇಕು.

ಆಡಿಯಾಲಜಿಸ್ಟ್ –

ಬ್ಯಾಚುಲರ್ ಡಿಗ್ರಿ ಇನ್ ಸ್ಫೀಚ್ ಅಂಡ್ ಲ್ಯಾಂಗ್ವೇಜ್ ಪ್ಯಾಥೋಲಾಜಿ.

ಆಪ್ಟೋಮೆಟ್ರಿಸ್ಟ್ –

ಬ್ಯಾಚುಲರ್ ಇನ್ ಆಪ್ಟೋಮೆಟ್ರಿ ಅಥವಾ ಮಾಸ್ಟರ್ ಇನ್ ಆಪ್ಟೋಮೆಟ್ರಿ.

ಸೈಕಾಲಜಿಸ್ಟ್ –

ಮಾಸ್ಟರ್ಸ್ ಡಿಗ್ರಿ ಇನ್ ಚೈಲ್ಡ್ ಪ್ಯಾಥಾಲಜಿ.

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು –

ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು ತರಬೇತಿಯನ್ನು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಎಎನ್ಎಮ್ ಶಾಲೆಗಳಲ್ಲಿ ಮಾತ್ರ ಪಡೆದಿರಬೇಕು ಮತ್ತು ಕರ್ನಾಟಕ ನರ್ಸಿಂಗ್ ಕೌನ್ಸಿಲ್ ನಲ್ಲಿ ನೊಂದಣಿ ಆಗಿರಬೇಕು.

ಫಾರ್ಮಸಿ ಅಧಿಕಾರಿಗಳು –

ಬಿ.ಫಾರ್ಮಾ/ ಡಿ.ಫಾರ್ಮಾ

ಆರೋಗ್ಯ ನೀರಿಕ್ಷಣಾಧಿಕಾರಿಗಳು –

ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವಿವಿಧೋದ್ದೇಶ ಮೂಲ ಆರೋಗ್ಯ ಕಾರ್ಯಕರ್ತರ ತರಬೇತಿಯನ್ನು ಪಡೆದಿರಬೇಕು. ಅಥವಾ
ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 3 ವರ್ಷಗಳ ಆರೋಗ್ಯ ನೀರಿಕ್ಷಕರ ಡಿಪ್ಲೊಮಾ ಹೊಂದಿರಬೇಕು ಅಥವಾ ಪಿಯುಸಿ (ವಿಜ್ಞಾನ) ತೇರ್ಗಡೆಯಾಗಿರಬೇಕು ಮತ್ತು ಕರ್ನಾಟಕ ಅರೆ ವೈದ್ಯಕೀಯ ಮಂಡಳಿ ನಡೆಸುವ 2 ವರ್ಷಗಳ ಆರೋಗ್ಯ ನೀರಿಕ್ಷಕರ ಡಿಪ್ಲೋಮಾ ಹೊಂದಿರಬೇಕು.

ಫಿಸಿಯೋಥೆರಪಿಸ್ಟ್ –

ಫಿಸಿಯೋಥೆರಪಿಯಲ್ಲಿ ಪದವಿ (ಬಿಪಿಟಿ).
ಎಕ್ಸರೇ ಟೆಕ್ನಿಷಿಯನ್ – 10ನೇ ತರಗತಿ & ಡಿಪ್ಲೊಮಾ ಇನ್ ಎಕ್ಸ-ರೇ/ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ ಅಥವಾ 10+2 (ಪಿಯುಸಿ) ಸೈನ್ಸ್ (ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ) ಮತ್ತು ಡಿಪ್ಲೊಮಾ ಇನ್ ಎಕ್ಸ-ರೇ/ ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ.

ಇನ್ಸೆಕ್ಟ್ ಕಲೆಕ್ಟರ್ –

ದ್ವಿತೀಯ ಪಿಯುಸಿ (ವಿಜ್ಞಾನ).

ಬ್ಲಾಕ್ ಎಫಿಡೆಮಿಯಾಲಜಿಸ್ಟ್ –

ಮೆಡಿಕಲ್ ಗ್ರಾಜುಯೇಟ್ ವಿತ್ ಪೋಸ್ಟ್ ಗ್ರಾಜುಯೇಟ್ ಡಿಗ್ರಿ/ ಡಿಪ್ಲೊಮಾ ಇನ್ ಪ್ರಿವೆಂಟಿವ್ ಅಂಡ್ ಸೋಷಿಯಲ್ ಮೆಡಿಸಿನ್/ ಪಬ್ಲಿಕ್ ಹೆಲ್ತ್ ಅಥವಾ ಎಪಿಡೆಮಿಯಾಲಜಿ (ಎಂ.ಡಿ, ಎಂ.ಪಿ.ಹೆಚ್, ಡಿ.ಪಿ.ಹೆಚ್, ಎಂ.ಎ.ಇ) ಅಥವಾ ಆಯುಷ್/ ಡೆಂಟಲ್ ಸೈನ್ಸಸ್ ಗ್ರಾಜುಯೇಟ್ ವಿತ್ ಎಂ.ಪಿ.ಹೆಚ್ (ಮಾಸ್ಟರ್ ಇನ್ ಪಬ್ಲಿಕ್ ಹೆಲ್ತ್)/ ಎಂ.ಎಸ್ಸಿ (ಎಪಿಡೆಮಿಯಾಲಜಿ).

ವೇತನ :

ಹುದ್ದೆವೇತನ
ಅರವಳಿಕೆ ತಜ್ಞರುರೂ. 1,30,000/-
ವೈದ್ಯಾಧಿಕಾರಿಗಳುರೂ. 60,000/-
ಶುಶ್ರೂಷಣಾಧಿಕಾರಿಗಳುರೂ. 14,187/-
ಪ್ರಯೋಗಶಾಲಾ ತಂತ್ರಜ್ಞರುರೂ. 14,187/-
ಆಡಿಯಾಲಜಿಸ್ಟ್ರೂ. 25,000/-
ಆಪ್ಟೋಮೆಟ್ರಿಸ್ಟ್ರೂ. 17,278/-
ಸೈಕಾಲಜಿಸ್ಟ್ರೂ. 25,000/-
ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳುರೂ. 15,925/-
ಫಾರ್ಮಸಿ ಅಧಿಕಾರಿಗಳುರೂ. 14,187/-
ಆರೋಗ್ಯ ನೀರಿಕ್ಷಣಾಧಿಕಾರಿಗಳುರೂ. 15,924/-
ಫಿಸಿಯೋಥೆರಪಿಸ್ಟ್ರೂ. 25,000/-
ಎಕ್ಸರೇ ಟೆಕ್ನಿಷಿಯನ್ರೂ. 17,435/-
ಇನ್ಸೆಕ್ಟ್ ಕಲೆಕ್ಟರ್ರೂ. 15,114/-
ಬ್ಲಾಕ್ ಎಫಿಡೆಮಿಯಾಲಜಿಸ್ಟ್ರೂ. 30,000/-

ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿದ ದಿನಾಂಕದ ವಿವರ :

  • ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ : ನವೆಂಬರ್ 07, 2026
  • ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ನವೆಂಬರ್ 26, 2026

ಅರ್ಜಿ ಶುಲ್ಕ :

ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.

DHFWS Vijayanagara Recruitment 2026 : Important Links

NOTIFICATIONCLICK HERE
APPLY ONLINECLICK HERE
Telegram Join LinkClick Here
WhatsApp Group LinkClick Here

ಪ್ರಮುಖ ಸೂಚನೆಗಳು: ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು

ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top