Gruhalakshmi Scheme: ಸೊಸೆ, ಮಗಳಿಗೆ ಮಾತ್ರ 2000 ಬರುತ್ತಾ? – ಗೃಹಲಕ್ಷ್ಮಿ’ಯಲ್ಲಿ ಬದಲಾವಣೆ – 3 ಕಡೆ ಮಾತ್ರ ಅರ್ಜಿಗೆ ಅವಕಾಶ 2026

Spread the love

ಬೆಂಗಳೂರು (ಜೂ.16): ಕಾಂಗ್ರೆಸ್​ ಸರಕಾರದ (Congress Government) ಗ್ಯಾರಂಟಿ ಯೋಜನೆಯ ಜನಪ್ರಿಯ ಸ್ಕೀಮ್​ ಅಂದ್ರೆ ಅದು ‘ಗೃಹಲಕ್ಷ್ಮಿ’. ಈ ಯೋಜನೆಯಡಿ ಮನೆ ಯಜಮಾನಿಗೆ ಮಾಸಿಕ 2,000 ರೂಪಾಯಿ ಆರ್ಥಿಕ ನೆರವು ನೀಡಲಾಗ್ತಿದೆ. ಇದೀಗ ಸರ್ಕಾರ ಗೃಹಲಕ್ಷ್ಮಿ ಸ್ಕೀಮ್ (Gruhalakshmi Scheme ) ಪರಿಷ್ಕರಣೆ ಮಾಡ್ತಿದ್ದು,  ಫಲಾನುಭವಿಗಳು (Beneficiaries) ಮತ್ತೊಮ್ಮೆ ಅರ್ಜಿ ಸಲ್ಲಿಸಬೇಕಾಗಿದೆ. ಈ ಬಾರಿ ಗೃಹಲಕ್ಷ್ಮಿ ಸ್ಕೀಮ್​​ಗೆ ಹೊಸ ಗೈಡ್​ಲೈನ್ (New Guidelines) ಜಾರಿಗೆ ತರಲಾಗಿದೆ. ಹೇಗೆ ಅರ್ಜಿ ಸಲ್ಲಿಸಬೇಕು.

WhatsApp Group Join Now
Telegram Group Join Now

ಈ ಬಾರಿ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರಮುಖ ಬದಲಾವಣೆ ತರಲಾಗಿದ್ದು, ಹೊಸ ಗೈಡ್​ಲೈನ್ ಪ್ರಕಟವಾಗಲಿದೆ. ಏನೆಲ್ಲಾ ಚೇಂಜ್ ಆಗ್ತಿದೆ. ಅರ್ಜಿ ಸಲ್ಲಿಸಲು ಏನು ಮಾಡ್ಬೇಕು

ಗೃಹಲಕ್ಷ್ಮಿ ಹೊಸ ಅರ್ಜಿ ಸಲ್ಲಿಕೆ ಹೇಗೆ? 3 ಕಡೆ ಅವಕಾಶ
ಬೆಂಗಳೂರು ಒನ್‌/ ಜಿಲ್ಲಾ ಒನ್‌ ಕೇಂದ್ರಗಳು

ಕರ್ನಾಟಕ ಒನ್‌
ಗ್ರಾಮ ಒನ್‌ ಕೇಂದ್ರಗಳಲ್ಲಿ ಮಾತ್ರ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ರಾಜ್ಯಾದ್ಯಂತ 15,000 ಅಧಿಕೃತ ಕೇಂದ್ರಗಳಿದ್ದು, ಅಲ್ಲೇ ಮಹಿಳೆಯರು ಹೊಸದಾಗಿ ಅರ್ಜಿ ಸಲ್ಲಿಸಬೇಕಿದೆ.
ಸೈಬರ್‌ ಸೆಂಟರ್‌ ಅಥವಾ ಮೊಬೈಲ್‌ ಆಪ್‌ಗಳಲ್ಲಿ ಅರ್ಜಿ ಸಲ್ಲಿಕೆ ಯಾವುದೇ ಅವಕಾಶವಿಲ್ಲ.

ಪಡಿತರ ಚೀಟಿ ಕಡ್ಡಾಯ
ಗೃಹಲಕ್ಷ್ಮಿ ಫಲಾನುಭವಿಗಳ ಬಳಿ ಬಿಪಿಎಲ್‌ ಅಥವಾ ಎಪಿಎಲ್‌ ಕಾರ್ಡ್‌ ಇರಲೇಬೇಕು. ಆದಾಯ ತೆರಿಗೆ ಪಾವತಿದಾರರು ಹಾಗೂ ಇದೇ ಕಾರಣದಿಂದ ಬಿಪಿಎಲ್‌ನಿಂದ ಎಪಿಎಲ್‌ಗೆ ವರ್ಗಾವಣೆಯಾದ ಕಾರ್ಡ್‌ದಾರರು ಹೊಸದಾಗಿ ಅರ್ಜಿ ಸಲ್ಲಿಸುವಂತಿಲ್ಲ.

ಅರ್ಹರಿಗೆ ತಪ್ಪೋದಿಲ್ಲ ಗೃಹಲಕ್ಷ್ಮಿ ಹಣ
ರಾಜ್ಯದಲ್ಲಿ ಸದ್ಯ 1.28 ಕೋಟಿ ಮಹಿಳೆಯರು ಗೃಹಲಕ್ಷ್ಮಿನ ಫಲಾನುಭವಿಗಳಾಗಿದ್ದು, ಇನ್ಮುಂದೆ ಹಣ ಬರುತ್ತೋ ಇಲ್ಲವೋ ಅನ್ನೋ ಗೊಂದಲ ಕೂಡ ಮೂಡಿದೆ. ಹೀಗಾಗಿ ಸರ್ಕಾರ ಸದ್ಯದಲ್ಲೇ ಹೊಸ ಮಾರ್ಗಸೂಚಿ ಪ್ರಕಟಿಸಿದ್ದು, ಕೇವಲ ಅರ್ಹರಿಗೆ ಮಾತ್ರ ಹಣ ತಲುಪುವಂತೆ ಮಾಡಲು ಸರ್ಕಾರ ಈ ಸರ್ಜರಿ ನಡೆಸಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸ್ಪಷ್ಟಪಡಿಸಿದೆ.

ಸೊಸೆ ಅಥವಾ ಮಗಳಿಗೆ ಮಾತ್ರ ಅವಕಾಶ!
ಈ ಬಾರಿ ಗೃಹಲಕ್ಷ್ಮಿ ಯೋಜನೆಯಲ್ಲಿ ಪ್ರಮುಖ ಬದಲಾವಣೆ ತರಲಾಗಿದ್ದು, ಒಂದು ವೇಳೆ ಈ ಹಿಂದೆ ಗೃಹಲಕ್ಷ್ಮಿ ಹಣ ಪಡೆಯುತ್ತಿದ್ದ ಅತ್ತೆ ಅಥವಾ ತಾಯಿ ನಿಧನರಾದ್ರೆ ಅವರ ಮುಂದಿನ ವಾರಸುದಾರರಾದ ಸೊಸೆ ಅಥವಾ ಮಗಳು ಇಬ್ಬರಲ್ಲಿ ಒಬ್ಬರು ಮಾತ್ರ ಈ ಯೋಜನೆಯ ಲಾಭ ಪಡೆಯಬಹುದು. ಆದ್ರೆ, ಅವರ ಹೆಸರು ಕಡ್ಡಾಯವಾಗಿ ಅದೇ ಪಡಿತರ ಚೀಟಿ ಉಲ್ಲೇಖ ಆಗಿರಲೇಬೇಕಿದೆ.

ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ ?
ಹೊಸ ಅರ್ಜಿ ಸಲ್ಲಿಯನ್ನ ಸರ್ಕಾರ ಹಂತ-ಹಂತವಾಗಿ ನಡೆಸಲು ಮುಂದಾಗಿದೆ. ಸರ್ವರ್ ಡೌನ್ ಆಗದಂತೆ, ಜನರಿಗೂ ಸಮಸ್ಯೆ ಆಗದಂತೆ ಅರ್ಜಿ ಸಲ್ಲಿಕೆಗೆ ಇಲಾಖೆ ವ್ಯವಸ್ಥೆ ಮಾಡುತ್ತಿದೆ.  ಫಲಾನುಭವಿಗಳ ಮೊಬೈಲ್‌ ಸಂಖ್ಯೆಗೆ ನೇರವಾಗಿ ಸಂದೇಶ ಬರಲಿದೆ.

ಗೃಹಲಕ್ಷ್ಮಿ ಹೊಸ ಅರ್ಜಿಗೆ ಏನೆಲ್ಲಾ ದಾಖಲೆ ಕೊಡ್ಬೇಕು?
ಮನೆ ಯಜಮಾನಿಯ ಹೆಸರು ಮತ್ತು ಆಧಾರ್ ಸಂಖ್ಯೆ
ಮನೆ ಯಜಮಾನಿಯ ಬ್ಯಾಂಕ್ ಖಾತೆ ವಿವರಗಳು
ಫಲಾನುಭವಿಯ ಜಾತಿ, ಆದಾಯ ಪ್ರಮಾಣ ಪತ್ರ
ಫಲಾನುಭವಿಯ ಪತಿಯ ಹೆಸರು ಜತೆಗೆ ಆಧಾರ್ ಸಂಖ್ಯೆ

ಎಪಿಎಲ್ ಅಥವಾ ಬಿಪಿಎಲ್ ಪಡಿತರ ಚೀಟಿ ಇಷ್ಟು ದಾಖಲೆ ನೀಡಿದ್ರೆ ಮಾತ್ರ ಹೊಸ ಅರ್ಜಿ ಸಲ್ಲಿಸಲು ಅವಕಾಶವಿರಲಿದೆ.

ಪ್ರಮುಖ ಸೂಚನೆಗಳು:ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು

ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.


Spread the love
Scroll to Top