ಬೆಂಗಳೂರು (ಜೂ.14): ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಹೆಚ್ಚು ಜನಪ್ರಿಯವಾದ ಗೃಹಲಕ್ಷ್ಮಿ (Gruhalakshmi), ಗೃಹಜ್ಯೋತಿ (Gruha Jyothi) ಯೋಜನೆಗಳ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಎರಡು ಯೋಜನೆಗಳಲ್ಲಿ ನಕಲಿ ಫಲಾನುಭವಿಗಳನ್ನ ಪತ್ತೆ ಹಚ್ಚಲು ಮತ್ತೆ ಹೊಸದಾಗಿ ಅರ್ಜಿ ಸಲ್ಲಿಕೆಯನ್ನ ಕಡ್ಡಾಯಗೊಳಿಸಿದೆ. ಗೃಹಜ್ಯೋತಿ ಮತ್ತು ಗೃಹಲಕ್ಷ್ಮಿ ಫಲಾನುಭವಿಗಳು ಸೌಲಭ್ಯ ಪಡೆಯಬೇಕಾದ್ರೆ ಅರ್ಜಿ ಸಲ್ಲಿಕೆ ಮಾಡುವುದು ಕಡ್ಡಾಯವಾಗಿದೆ.

ಹೊಸ ಅರ್ಜಿಯಲ್ಲಿ ಏನೆಲ್ಲಾ ಮಾನದಂಡ?
1)ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹೊಸದಾಗಿ ಅರ್ಜಿ ತಯಾರಿಸಿದೆ.
2)ಹೊಸ ಅರ್ಜಿ ಮತ್ತು ಅದರಲ್ಲಿ ಇರುವ ಪ್ರಶ್ನೆಗಳನ್ನ ಸರ್ಕಾರ ಮತ್ತು ಹಣಕಾಸು ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದೆ.
3)ಈ ಬಾರಿ ಗೃಹಲಕ್ಷ್ಮಿ ಯೋಜನೆ ಅರ್ಜಿ ಪ್ರತಿಯಲ್ಲಿ ಏನೆಲ್ಲಾ ಪ್ರಶ್ನೆಗಳಿರಬಹುದು?
4)ಯಾವೆಲ್ಲಾ ದಾಖಲೆಗಳನ್ನು ನೀಡಬೇಕು?
ಆಧಾರ್ ಜೊತೆ ಐಡಿ ಕೂಡ ಕಡ್ಡಾಯ
* ಗೃಹಲಕ್ಷ್ಮಿ ಯೋಜನೆಯಲ್ಲಿ ಮೇಜರ್ ಸರ್ಜರಿಗೆ ಸರ್ಕಾರ ಮುಂದಾಗಿದೆ. ಈಗಾಗಲೇ ರಾಜ್ಯದಲ್ಲಿದ್ದಾರೆ 1.30 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿದ್ದು, ಇನ್ಮುಂದೆ ಗೃಹಲಕ್ಷ್ಮಿ ಹಣಕ್ಕೆ ಬಯೋಮೆಟ್ರಿಕ್ ಕಡ್ಡಾಯವಾಗಿದೆ.
* ಬೆಂಗಳೂರು ಒನ್, ಗ್ರಾಮಒನ್, ಸೇವಾ ಕೇಂದ್ರ, ಬಾಪೂಜಿ ಸೇವಾ ಕೇಂದ್ರ ಗಳಲ್ಲಿ ಬಯೋಮೆಟ್ರಿಕ್ ಪ್ರತಿಕ್ರಿಯೆ ನಡೆಯಲಿದೆ. ಬಯೋಮೆಟ್ರಿಕ್ ಗೆ ಆಧಾರ್ ಕಡ್ಡಾಯ ಜೊತೆಗೆ ಮಹಿಳಾ ಇಲಾಖೆ ನೀಡಿರುವ ID ಕೂಡ ಕಡ್ಡಾಯವಾಗಿದೆ.
ಹೊಸ ಅರ್ಜಿಗೆ ಸಲ್ಲಿಕೆ ಕಡ್ಡಾಯ!
ಗೃಹಲಕ್ಷ್ಮಿ, ಗೃಹಜ್ಯೋತಿ ಯೋಜನೆಗಾಗಿ ಅರ್ಜಿ ಸಲ್ಲಿಕೆ ಕಡ್ಡಾಯ ಮಾಡಿದ ಸರ್ಕಾರ, ಶೀಘ್ರದಲ್ಲೇ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಿದೆ. ಇದಕ್ಕೆ ಸಂಬಂಧಿಸಿದಂತೆ ಹೊಸ ಅರ್ಹತಾ ಮಾನದಂಡಗಳು ಬಹಿರಂಗಗೊಳಿಸಿದೆ.
ಏನೆಲ್ಲ ಪ್ರಶ್ನೆಗಳು ಇರಲಿವೆ? ಯಾವೆಲ್ಲಾ ದಾಖಲೆ ಕೊಡಬೇಕು?
- ಮನೆ ಯಜಮಾನಿ ಯಾರು? ಆಧಾರ್ ಸಂಖ್ಯೆ ಏನು?
- ಮನೆಯ ಯಜಮಾನಿ ಬ್ಯಾಂಕ್ ಖಾತೆ ವಿವರ
- ಈ ಹಿಂದೆ ಮನೆಯಲ್ಲಿ ಎಷ್ಟು ಸದಸ್ಯರಿಗೆ ಗೃಹಲಕ್ಷ್ಮಿ ಹಣ ಖಾತೆಗೆ ಬರುತ್ತಿತ್ತು
- ಯಾವ ಜಾತಿ ?
- ಮನೆಯ ಯಜಮಾನಿ ಪತಿಯ ಹೆಸರು ? ಆಧಾರ್ ಸಂಖ್ಯೆ ?
- ಆಧಾರ್ ಕಾರ್ಡ್ ದಾಖಲಾತಿ ಸಲ್ಲಿಕೆ ಮಾಡಬೇಕು
- ನೀವು ಐಟಿ ಮತ್ತು ಜಿಎಸ್ ಟಿ ಪಾವತಿದಾರರ ?
- ನಿಮ್ಮ ಬಳಿ APL ಕಾರ್ಡ್ ಅಥವಾ BPL ಕಾರ್ಡ್ ಇದೆಯಾ ?
ಗ್ಯಾರಂಟಿ ಯೋಜನೆಗಳ ಹೊಸ ಅರ್ಜಿ ಸಲ್ಲಿಕೆಗೆ ಸರ್ಕಾರ ಶೀಘ್ರದಲ್ಲೇ ಆದೇಶ ಹೊರಡಿಸಲಿದ್ದು, ಬೆಂಗಳೂರು ಒನ್ , ಕರ್ನಾಟಕ ಒನ್, ಗ್ರಾಮ ಒನ್ ಮತ್ತು ಆಫ್ ಲೈನಲ್ಲೂ ಅರ್ಜಿ ಸಲ್ಲಿಕೆಗೆ ಅವಕಾಶ ನೀಡುವ ಸಾಧ್ಯತೆ ಇದೆ.
ಬಯೋಮೆಟ್ರಿಕ್ಗೆ ಜಾತಿ ಸರ್ಟಿಫಿಕೇಟ್ ಕೊಡಲೇಬೇಕು!
ಗೃಹಲಕ್ಷ್ಮಿ ಫಲಾನುಭವಿಗಳು ಸೇವಾ ಕೇಂದ್ರಗಳಿಗೆ ಹೋಗಿ ತಮ್ಮ ಹೆಬ್ಬೆಟ್ಟು ಅಥವಾ ಕಣ್ಣುಗಳು ಅಥವಾ ಫೇಸ್ ಸ್ಕ್ಯಾನ್ ಮಾಡಿಸಿಬೇಕು. ನೀವು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ್ರೆ RD ನಂಬರ್ ಕಡ್ಡಾಯ, ಜಾತಿ ಸರ್ಟಿಫಿಕೇಟ್ನಲ್ಲಿರೋ RD ನಂಬರ್ ನೀಡಿ ಸಂಪೂರ್ಣ ಫಾರ್ಮ್ ತುಂಬಿದ ನಂತರವೇ ಗೃಹಲಕ್ಷ್ಮಿ ಹಣ ಬರಲಿದೆ.
ಪ್ರಮುಖ ಸೂಚನೆಗಳು: ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು
ಕೊನೆಯ ಪದಗಳು :ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
