ನವದೆಹಲಿ: ಔಷಧಗಳು, ಆಟೋಮೊಬೈಲ್ ಮತ್ತು ಉಪಕರಣಗಳು ಸೇರಿದಂತೆ ಸುಮಾರು 375 ವಸ್ತುಗಳ ಮೇಲೆ ಹೊಸ ಜಿಎಸ್ಟಿ ಬೆಲೆ ಇಂದಿನಿಂದ(ಸೆ. 22) ಜಾರಿಗೆ ಬರಲಿದೆ. ಈ ಹಿನ್ನೆಲೆ ಅಡುಗೆ ಸಾಮಗ್ರಿಗಳ ಬೆಲೆಗಳು ಸೋಮವಾರದಿಂದ ಇಳಿಕೆಯಾಗಲಿದೆ.
ಕೇಂದ್ರ ಮತ್ತು ರಾಜ್ಯಗಳನ್ನು ಒಳಗೊಂಡ ಜಿಎಸ್ಟಿ ಮಂಡಳಿಯು ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22 ರಿಂದ ಸರಕು ಮತ್ತು ಸೇವೆಗಳ ಮೇಲಿನ ತೆರಿಗೆ ಬೆಲೆಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಇದು ಗ್ರಾಹಕರಿಗೆ ವರದಾನವಾಗಿದೆ.
ತುಪ್ಪ, ಪನೀರ್, ಬೆಣ್ಣೆ, ನಮ್ಕೀನ್, ಕೆಚಪ್, ಜಾಮ್, ಡ್ರೈ ಫ್ರೂಟ್ಸ್, ಕಾಫಿ ಮತ್ತು ಐಸ್ಕ್ರೀಮ್, ಟಿವಿ, ಎಸಿ, ವಾಷಿಂಗ್ ಮಷಿನ್ ಸೇರಿದಂತೆ ಇತರ ವಸ್ತುಗಳು ಕಡಿಮೇವಾಗಲಿದೆ . ಹೊಸ ಜಿಎಸ್ಟಿ ಜಾರಿ ಆಗುತ್ತಿರುವುದರಿಂದ ವಿವಿಧ ಎಫ್ಎಂಸಿಜಿ ಕಂಪನಿಗಳು ಈಗಾಗಲೇ ವಸ್ತು ಮತ್ತು ಸೇವೆಗಳ ಮೇಲೆ ಬೆಲೆ ಕಡಿಮೆ ಮಾಡಿದ್ದಾರೆ .

ಬಹುತೇಕ ಔಷಧಗಳು, ಫಾರ್ಮುಲೇಶನ್ಗಳು, ಗ್ಲುಕೋಮೀಟರ್ಗಳು, ಡಯಾಗ್ನೋಸ್ಟಿಕ್ ಕಿಟ್ಗಳು ಸೇರಿದಂತೆ ವೈದ್ಯಕೀಯ ಸಾಧನಗಳ ಮೇಲಿನ ಜಿಎಸ್ಟಿಯನ್ನು ಶೇ.5ಕ್ಕೆ ಕಡಿಮೆಲಾಗಿದೆ. ಅಲ್ಲದೇ, ಸಿಮೆಂಟ್ ಮೇಲಿನ ಜಿಎಸ್ಟಿಯನ್ನು ಶೇ.28 ರಿಂದ ಶೇ.18ಕ್ಕೆ ಕಡಿತಗೊಳಿಸುವುದರಿಂದ ಜನ ಸಾಮಾನ್ಯರಿಗೆ ಅನುಕೂಲವಾಗಲಿದೆ.
ಸರ್ಕಾರವು ಈಗಾಗಲೇ ಔಷಧ ಕಂಪನಿಗಳು ಮತ್ತು ಅಂಗಡಿಗಳಿಗೆ ಎಂಆರ್ಪಿ ಪರಿಷ್ಕರಿಸಲು ಮತ್ತು ಕಡಿಮೆ ಬೆಲೆಗಳಲ್ಲಿಔಷಧಗಳನ್ನು ಮಾರಾಟ ಮಾಡಲು ನಿರ್ದೇಶಿಸಿದೆ. ಇನ್ನು ಸಣ್ಣ ಮತ್ತು ದೊಡ್ಡ ಕಾರುಗಳಿಗೆ ಜಿಎಸ್ಟಿ ಬೆಲೆಗಳನ್ನು ಕ್ರಮವಾಗಿ ಶೇ.18 ಮತ್ತು ಶೇ.28ಕ್ಕೆಕಡಿಮೆ ಮಾಡಲಾಗಿದೆ . ಹಲವಾರು ಕಾರು ಕಂಪನಿಗಳು ಈಗಾಗಲೇ ಬೆಲೆಗಳಲ್ಲಿ ಕಡಿಮೆ ಮಾಡಲಾಗಿದೆ .
ಸೇವೆಗಳಿಗೆ ಸಂಬಂಧಿಸಿದಂತೆ, ಆರೋಗ್ಯ ಕ್ಲಬ್ಗಳು, ಸಲೂನ್ಗಳು, ಫಿಟ್ನೆಸ್ ಸೆಂಟರ್ಗಳು ಸೇರಿದಂತೆ ಸೌಂದರ್ಯ ಮತ್ತು ದೈಹಿಕ ಯೋಗಕ್ಷೇಮ ಸೇವೆಗಳ ಮೇಲಿನ ಜಿಎಸ್ಟಿಯನ್ನು ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಹೊಂದಿರುವ ಶೇ.18 ರಿಂದ ಜಿಎಸ್ಟಿ ಕ್ರೆಡಿಟ್ ಇಲ್ಲದೇ ಶೇ.5ಕ್ಕೆ ಕಡಿಮೆ ಮಾಡಲಾಗಿದೆ. ಅಲ್ಲದೇ, ಹೇರ್ ಆಯಿಲ್, ಟಾಯ್ಲೆಟ್ ಸೋಪ್ ಬಾರ್ಗಳು, ಶಾಂಪೂಗಳು, ಟೂತ್ ಬ್ರಷ್, ಟೂತ್ಪೇಸ್ಟ್ನಂತಹ ದೈನಂದಿನ ಬಳಕೆಯ ವಸ್ತುಗಳ ಮೇಲಿನ ಜಿಎಸ್ಟಿ ಪ್ರಸ್ತುತ ಶೇ.12/18 ರಿಂದ ಶೇ.5ಕ್ಕೆ ಇಳಿಸಲಾಗಿರುವುದರಿಂದ ಅವು ಇಳಿಕೆಯಾಗುವ ಸಾಧ್ಯತೆಯಿದೆ.
ಟಾಲ್ಕಮ್ ಪೌಡರ್, ಫೇಸ್ ಪೌಡರ್, ಶೇವಿಂಗ್ ಕ್ರೀಮ್, ಆಫ್ಟರ್ – ಶೇವ್ ಲೋಷನ್ನಂತಹ ಇತರ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಗಳು ಕಡಿಮೆಯಾಗುವ ಸಾಧ್ಯತೆ ಇದೆ. ಏಕೆಂದರೆ ಜಿಎಸ್ಟಿ ಶೇ.18 ರಿಂದ ಶೇ.5ಕ್ಕೆಕಡಿಮೆ ಮಾಡಲಾಗಿದೆ .
ಜಿಎಸ್ಟಿ ತೆರಿಗೆಯ ಎರಡು ಸ್ಲ್ಯಾಬ್ಗಳಾದ ಶೇ.5 ಮತ್ತು 18 ನಾಳೆಯಿಂದ ಜಾರಿಗೆ ಬರಲಿದೆ. ಅಲ್ಟ್ರಾ ಐಷಾರಾಮಿ ವಸ್ತುಗಳ ಮೇಲೆ ಶೇ.40 ರಷ್ಟು ಜಿಎಸ್ಟಿ ವಿಧಿಸಲಾಗುತ್ತದೆ ಮತ್ತು ತಂಬಾಕು ಮತ್ತು ಸಂಬಂಧಿತ ಉತ್ಪನ್ನಗಳು ಶೇ.28 ರಷ್ಟು ಪ್ಲಸ್ ಸೆಸ್ ವಿಭಾಗದಲ್ಲಿ ಮುಂದುವರಿಯುತ್ತವೆ.
ಪ್ರಸ್ತುತ, ಸರಕು ಮತ್ತು ಸೇವಾ ತೆರಿಗೆಯನ್ನು 5, 12, 18 ಮತ್ತು 28 ಪ್ರತಿಶತದ 4 ಸ್ಲ್ಯಾಬ್ಗಳಲ್ಲಿ ವಿಧಿಸಲಾಗುತ್ತದೆ. ಇದಲ್ಲದೆ, ಐಷಾರಾಮಿ ವಸ್ತುಗಳ ಸೆಸ್ ವಿಧಿಸಲಾಗುತ್ತಿದೆ. ಸದ್ಯ ಜಿಎಸ್ಟಿ ಸುಧಾರಣೆ ದೇಶದ ಆರ್ಥಿಕತೆಗೆ 2 ಲಕ್ಷ ಕೋಟಿ ರೂ.ಗಳನ್ನು ಹರಿಸುತ್ತದೆ, ಜನರಿಗೆ ಕೈಯಲ್ಲಿ ಹಣ ಉಳಿಸುತ್ತದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚಿಗೆ ಹೇಳಿದ್ದರು.
ಶೇ.12 ಜಿಎಸ್ಟಿ ಸ್ಲ್ಯಾಬ್ನಲ್ಲಿರುವ ಸುಮಾರು 99 ಪ್ರತಿಶತ ಸರಕುಗಳನ್ನು ಶೇ.5 ರಷ್ಟಕ್ಕೆ ಕಡಿಮೆ ಮಾಡಲಾಗಿದೆ . . ಶೇ.28ರ ತೆರಿಗೆ ಸ್ಲ್ಯಾಬ್ನಲ್ಲಿರುವ 90 ಪ್ರತಿಶತ ವಸ್ತುಗಳನ್ನು ಶೇ.18 ಜಿಎಸ್ಟಿ ಬೆಲೆಗೆ ಕಡಿಮೆ ಮಾಡಲಾಗಿದೆ . .
ಯಾವ ವಸ್ತುಗಳ ಬೆಲೆ ಇಳಿಕೆ? ಯಾವ ವಸ್ತುಗಳ ಬೆಲೆ ಏರಿಕೆ?
:ದೈನಂದಿನ ಅಗತ್ಯ ವಸ್ತುಗಳು: ಯುಎಚ್ಟಿ ಹಾಲು, ಪನೀರ್, ಪರಾಠಾ, ಪಿಜ್ಜಾ ಬ್ರೆಡ್, ಖಾಖ್ರಾಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ. ಬೆಣ್ಣೆ, ತುಪ್ಪ, ಚೀಸ್, ಜಾಮ್ಗಳು, ಸಾಸ್ಗಳು, ಸೂಪ್ಗಳು, ಪಾಸ್ತಾ, ನಮ್ಕೀನ್ ಮತ್ತು ಮಿಠಾಯಿಗಳು ಶೇ.12-18% ತೆರಿಗೆಯಿಂದ ಶೇ.5% ಕ್ಕೆ ಕಡಿಮೆ ಮಾಡಲಾಗಿದೆ. ಒಣ ಹಣ್ಣುಗಳು, ಖರ್ಜೂರ ಮತ್ತು ಸಿಟ್ರಸ್ ಹಣ್ಣುಗಳು ಸಹ ಶೇ.5% ಜಿಎಸ್ಟಿ ವ್ಯಾಪ್ತಿಗೆ ಬಂದಿವೆ.
ಔಷಧಿ ಮತ್ತು ವೈದ್ಯಕೀಯ ಉಪಕರಣಗಳು: ಜೀವರಕ್ಷಕ ಔಷಧಿಗಳಾದ ಅಗಲ್ಸಿಡೇಸ್ ಬೀಟಾ, ಒನಾಸೆಮ್ನೋಜೀನ್, ಡರಟುಮುಮಾಬ್ ಮತ್ತು ಅಲೆಕ್ಟಿನಿಬ್ಗಳಿಗೆ ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ. ಬಹುತೇಕ ಔಷಧಿಗಳು, ವೈದ್ಯಕೀಯ ಸಾಧನಗಳು, ರೋಗನಿರ್ಣಯ ಕಿಟ್ಗಳು, ಬ್ಯಾಂಡೇಜ್ಗಳು, ಥರ್ಮಾಮೀಟರ್ಗಳು ಮತ್ತು ಆಮ್ಲಜನಕದ ಮೇಲೆ ಶೇ.12-18% ರಷ್ಟಿದ್ದ ತೆರಿಗೆ ಶೇ.5% ಕ್ ಕಡಿಮೆ ಮಾಡಲಾಗಿದೆ. ಎಲ್ಲಾ ವೈಯಕ್ತಿಕ ಜೀವ ಮತ್ತು ಆರೋಗ್ಯ ವಿಮಾ ಪಾಲಿಸಿಗಳನ್ನು ಹೆಚ್ಚು ಜನರಿಗೆ ವಿಸ್ತರಿಸಲು ಜಿಎಸ್ಟಿಯಿಂದ ವಿನಾಯಿತಿ ನೀಡಲಾಗಿದೆ.
ದಿನ ಬಳಕೆ ವಸ್ತುಗಳು: ಹೇರ್ ಆಯಿಲ್, ಶಾಂಪೂಗಳು, ಟೂತ್ಪೇಸ್ಟ್, ಸೋಪ್ಗಳು, ಶೇವಿಂಗ್ ಉತ್ಪನ್ನಗಳು, ಟಾಲ್ಕಮ್ ಪೌಡರ್, ಟೂತ್ ಬ್ರಷ್ಗಳು, ಮೇಣದಬತ್ತಿಗಳು ಮತ್ತು ಬೆಂಕಿ ಪೊಟ್ಟಣ ಈಗ ಶೇ. 5% ಜಿಎಸ್ಟಿ ತೆರಿಗೆ ವ್ಯಾಪ್ತಿಗೆ ಬಂದಿವೆ. ನೋಟ್ಬುಕ್ಗಳು, ಪೆನ್ಸಿಲ್ಗಳು, ಶಾರ್ಪನರ್ಗಳು ಮತ್ತು ಎರೇಸರ್ಗಳಂತಹ ಸ್ಟೇಷನರಿ ವಸ್ತುಗಳು ಸಹ ಇಳಿಕೆಯಾಗಲಿದೆ..
ವಾಹನಗಳು ಮತ್ತು ಕಟ್ಟಡ ಸಾಮಗ್ರಿಗಳು: ಸಿಮೆಂಟ್ ಮೇಲಿನ ಜಿಎಸ್ಟಿ ಶೇ.28% ರಿಂದ 18% ಕ್ಕೆ ಕಡಿಮೆ ಮಾಡಲಾಗಿದೆ. ಟ್ರ್ಯಾಕ್ಟರ್ಗಳು, ಸೈಕಲ್ಗಳು, 350 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಬೈಕ್ ಗಳು, ಸಣ್ಣ ಕಾರುಗಳು, ಎಲೆಕ್ಟ್ರಿಕ್ ಮತ್ತು ಹೈಬ್ರಿಡ್ ವಾಹನಗಳು ಮತ್ತು ಆಂಬ್ಯುಲೆನ್ಸ್ಗಳ ಮೇಲಿನ ಜಿಎಸ್ಟಿ ಕಡಿಮೆಯಾಗಲಿವೆ. ಅಮೃತಶಿಲೆ, ಗ್ರಾನೈಟ್ ಬ್ಲಾಕ್ಗಳು ಮತ್ತು ಪರಿಸರ ಸ್ನೇಹಿ ಕಟ್ಟಡ ಸಾಮಗ್ರಿಗಳು ಸಹ ಶೇ.5% ರಷ್ಟು ಜಿಎಸ್ಟಿ ವ್ಯಾಪ್ತಿಗೆ ಬಂದಿವೆ.
ಯಾವುದು ದುಬಾರಿ? ಪಾನ್ ಮಸಾಲ, ಗುಟ್ಕಾ, ಜಗಿಯುವ ತಂಬಾಕು ಮತ್ತು ಸಿಗರೇಟ್, ಕಾರ್ಬೊನೇಟೆಡ್/ಏರೇಟೆಡ್ ತಂಪು ಪಾನೀಯಗಳು, ಕೆಫೀನ್ ನಿಂದ ತಯಾರಿಸಿದ ಪಾನೀಯಗಳು ಮತ್ತು ಹಣ್ಣು ಆಧಾರಿತ ಫಿಜ್ಜಿ ಪಾನೀಯಗಳ ಮೇಲೆಯೂ ಶೇ.40% ಜಿಎಸ್ಟಿ ವಿಧಿಸಲಾಗುತ್ತದೆ.
ಐಷಾರಾಮಿ ಸರಕುಗಳು: 1200 ಸಿಸಿ/1500 ಸಿಸಿಗಿಂತ ಹೆಚ್ಚಿನ ಎಂಜಿನ್ ಹೊಂದಿರುವ ಎಸ್ಯುವಿಗಳು ಮತ್ತು ದೊಡ್ಡ ಕಾರುಗಳು. 350 ಸಿಸಿಗಿಂತ ಹೆಚ್ಚಿನ ಎಂಜಿನ್ ಹೊಂದಿರುವ ಬೈಕ್ ಗಳು, ಪ್ರವಾಸಿ ಹಡಗುಗಳು, ಖಾಸಗಿ ವಿಮಾನಗಳು, ರಿವಾಲ್ವರ್ಗಳು ಮತ್ತು ಪಿಸ್ತೂಲ್ಗಳು ಶೇ. 40% ತೆರಿಗೆ ವ್ಯಾಪ್ತಿಗೆ ಬರಲಿವೆ.
ಇವುಗಳೂ ದುಬಾರಿ:
- ಕಲ್ಲಿದ್ದಲು, ಲಿಗ್ನೈಟ್ ಮತ್ತು ಪೀಟ್ ಮೇಲೆ ಶೇ. 18% ತೆರಿಗೆ ವಿಧಿಸಲಾಗುತ್ತದೆ.
- ಡೀಸೆಲ್ ಬೆರೆಸದ ಬಯೋಡೀಸೆಲ್ ಶೇ. 12% ರಿಂದ 18% ಕ್ಕೆ ಏರಿಕೆಯಾಗಿವೆ
- 2,500 ರೂ.ಗಿಂತ ಹೆಚ್ಚಿನ ಬೆಲೆಯ ಪ್ರೀಮಿಯಂ ಉಡುಪುಗಳು, ಜವಳಿ ಮತ್ತು ಹೆಚ್ಚಿನ ಮೌಲ್ಯದ ಹತ್ತಿ ಕ್ವಿಲ್ಟ್ಗಳು ಸಹ 18% ಕ್ಕೆ ಏರಿಕೆಯಾಗುತ್ತವೆ.
- ಕ್ರಾಫ್ಟ್ ಪೇಪರ್ ಸೇರಿದಂತೆ ಕೆಲವು ಕಾಗದದ ಉತ್ಪನ್ನಗಳಿಗೆ ಶೇ. 18% ಜಿಎಸ್ಟಿ ತೆರಿಗೆ ವಿಧಿಸಲಾಗುತ್ತದೆ.
ಪ್ರಮುಖ ಸೂಚನೆಗಳು:
ಸಾರ್ವಜನಿಕರು ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು.
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿ/ನ್ಯೂಸ್ಗಳು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ.
