Indian Coast Guard Recruitment 2025 : ಇಂಡಿಯನ್ ಕೋಸ್ಟ್ ಗಾರ್ಡ್ ಇದರಲ್ಲಿ ಅಗತ್ಯವಿರುವ ನಾವಿಕ (ಜನರಲ್ ಡ್ಯೂಟಿ), ನಾವಿಕ (ಡೊಮೆಸ್ಟಿಕ್ ಬ್ರಾಂಚ್) ಹಾಗೂ ಯಾಂತ್ರಿಕ ಹುದ್ದೆಗಳ ಭರ್ತಿಗೆ ಅರ್ಹ ಹಾಗೂ ಆಸಕ್ತ ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ಹುದ್ದೆಗಳ ಸಂಖ್ಯೆ, ಕರ್ತವ್ಯ ಸ್ಥಳ, ಶೈಕ್ಷಣಿಕ ಅರ್ಹತೆ, ವಯೋಮಾನ, ಅರ್ಜಿ ಸಲ್ಲಿಕೆ ವಿಧಾನ ಹಾಗೂ ಇತರೆ ಮಾಹಿತಿಯನ್ನು ಈ ಕೆಳಗಡೆ ವಿವರವಾಗಿ ನೀಡಲಾಗಿದೆ ಪೂರ್ತಿ ಓದಿ.

Indian Coast Guard Recruitment 2025 : Details of Vacancies
ಹುದ್ದೆ : ನಾವಿಕ (ಜನರಲ್ ಡ್ಯೂಟಿ), ನಾವಿಕ (ಡೊಮೆಸ್ಟಿಕ್ ಬ್ರಾಂಚ್), ಯಾಂತ್ರಿಕ.
ಖಾಲಿಯಿರುವ ಹುದ್ದೆಗಳ ಸಂಖ್ಯೆ : ಒಟ್ಟು 630 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
| ಹುದ್ದೆ | ಹುದ್ದೆಗಳ ಸಂಖ್ಯೆ |
| ನಾವಿಕ (ಜನರಲ್ ಡ್ಯೂಟಿ) | 520 |
| ನಾವಿಕ (ಡೊಮೆಸ್ಟಿಕ್ ಬ್ರಾಂಚ್) | 50 |
| ಯಾಂತ್ರಿಕ (ಮೆಕ್ಯಾನಿಕಲ್) | 30 |
| ಯಾಂತ್ರಿಕ (ಇಲೆಕ್ಟ್ರಿಕಲ್) | 11 |
| ಯಾಂತ್ರಿಕ (ಇಲೆಕ್ಟ್ರಾನಿಕ್ಸ್) | 19 |
ಕರ್ತವ್ಯ ಸ್ಥಳ : ಹುದ್ದೆಗಳಿಗೆ ಆಯ್ಕೆಯಾಗುವ ಅರ್ಹ ಅಭ್ಯರ್ಥಿಗಳು ಭಾರತದೆಲ್ಲೆಡೆ ಕರ್ತವ್ಯ ನಿರ್ವಹಿಸಬೇಕು.
ವಯೋಮಿತಿ : ಅಭ್ಯರ್ಥಿಗಳಿಗೆ ಕನಿಷ್ಠ 18 ವರ್ಷ ಪೂರೈಸಿರಬೇಕು ಹಾಗೂ ಗರಿಷ್ಠ 22 ವರ್ಷ ಮೀರಿರಬಾರದು.
ನಿಗದಿಪಡಿಸಿರುವ ಶೈಕ್ಷಣಿಕ ಅರ್ಹತೆ :
• ನಾವಿಕ (ಜನರಲ್ ಡ್ಯೂಟಿ) – ಗಣಿತ ಹಾಗೂ ಭೌತಶಾಸ್ತ್ರ ವಿಷಯದಲ್ಲಿ ದ್ವಿತೀಯ ಪಿಯುಸಿ ಹೊಂದಿರಬೇಕು.
• ನಾವಿಕ (ಡೊಮೆಸ್ಟಿಕ್ ಬ್ರಾಂಚ್) – 10ನೇ ತರಗತಿ ಶೈಕ್ಷಣಿಕ ಅರ್ಹತೆ ಹೊಂದಿರಬೇಕು.
• ಯಾಂತ್ರಿಕ – 10ನೇ ತರಗತಿ/ 10ನೇ ತರಗತಿ & 12ನೇ ತರಗತಿ ಮತ್ತು ಡಿಪ್ಲೋಮಾ ಇನ್ ಇಲೆಕ್ಟ್ರಿಕಲ್/ ಮೆಕ್ಯಾನಿಕಲ್/ ಇಲೆಕ್ಟ್ರಾನಿಕ್ಸ್ / ಟೆಲಿಕಮ್ಯುನಿಕೇಷನ್ (ರೇಡಿಯೋ/ ಪವರ್) ಇಂಜಿನಿಯರಿಂಗ್ ಶೈಕ್ಷಣಿಕ ಅರ್ಹತೆ ಪಡೆದಿರಬೇಕು.
ಉದ್ಯೋಗ ಮಾಹಿತಿ : Nirmithi Kendra Raichur Accountant Recruitment 2025 – ರಾಯಚೂರು ನಿರ್ಮಿತಿ ಕೇಂದ್ರ ನೇಮಕಾತಿ 2025
ವೇತನ :
| ಹುದ್ದೆ | ವೇತನ |
| ನಾವಿಕ (ಜನರಲ್ ಡ್ಯೂಟಿ) | 21,700 |
| ನಾವಿಕ (ಡೊಮೆಸ್ಟಿಕ್ ಬ್ರಾಂಚ್) | 21,700 |
| ಯಾಂತ್ರಿಕ | 29,200 |
ವಯೋಮಿತಿ ಸಡಿಲಿಕೆ :
• ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ – 05 ವರ್ಷ
• ಒಬಿಸಿ ಅಭ್ಯರ್ಥಿಗಳಿಗೆ – 03
ಶುಲ್ಕ ಪಾವತಿಸುವ ವಿಧಾನ : ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್, ಯುಪಿಐ ಮೂಲಕ ಶುಲ್ಕ ಪಾವತಿಸಬಹುದು.
ಆಯ್ಕೆ ವಿಧಾನ : ಕಂಪ್ಯೂಟರ್ ಆಧಾರಿತ ಪರೀಕ್ಷೆ, ಅಸೆಸ್ಮೆಂಟ್ ಟೆಸ್ಟ್, ಫಿಸಿಕಲ್ ಫಿಟ್ನೆಸ್ ಟೆಸ್ಟ್, ದಾಖಲೆಗಳ ಪರಿಶೀಲನೆ ಹಾಗೂ ವೈದ್ಯಕೀಯ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುವುದು.
ನಿಗದಿತ ಅರ್ಜಿ ಶುಲ್ಕದ ವಿವರ :
• ಎಸ್ಸಿ, ಎಸ್ಟಿ ಅಭ್ಯರ್ಥಿಗಳಿಗೆ ಶುಲ್ಕ ಇರುವುದಿಲ್ಲ
• ಉಳಿದ ಅಭ್ಯರ್ಥಿಗಳು – ರೂ. 300
ಅರ್ಜಿ ಸಲ್ಲಿಕೆಯ ವಿಧಾನ : ಅಭ್ಯರ್ಥಿಯು ಈ ಹುದ್ದೆಗೆ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು.
ಹಂತ 1 : ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವ ಮೊದಲು ಇಲಾಖೆ ಹೊರಡಿಸಿರುವ ಅಧಿಸೂಚನೆಯನ್ನು ಗಮನವಿಟ್ಟು ಓದಿ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿಕೊಂಡು ನಂತರ ಅರ್ಜಿಯನ್ನು ಸಲ್ಲಿಸಬೇಕು.
ಹಂತ 2 : ಇಲಾಖೆಯ ವೆಬ್‌ಸೈಟ್ ಗೆ ಭೇಟಿ ನೀಡಿ ಅಥವಾ ಈ ಕೆಳಗಡೆ ನೀಡಲಾದ ಅಪ್ಲೈ ಆನ್‌ಲೈನ್ ಲಿಂಕ್ ಮೇಲೆ ಕ್ಲಿಕ್ ಮಾಡಿ ಅಪ್ಲಿಕೇಷನ್ ತೆರೆದುಕೊಳ್ಳಿ.
ಹಂತ 3 : ಅಪ್ಲಿಕೇಷನ್ ನಲ್ಲಿ ತಿಳಿಸಿರುವಂತಹ ಎಲ್ಲಾ ಮಾಹಿತಿಯನ್ನು (ಉದಾಹರಣೆಗೆ ಅಭ್ಯರ್ಥಿಯ ಹೆಸರು, ವಿಳಾಸ, ವಿದ್ಯಾರ್ಹತೆ, ಮೊಬೈಲ್ ಸಂಖ್ಯೆ ಇತ್ಯಾದಿ) ಭರ್ತಿ ಮಾಡಿ, ಮುಂದಿನ ಹಂತಕ್ಕೆ ತೆರಳುವ ಮುನ್ನ ಪುನಃ ಒಮ್ಮೆ ಪರಿಶೀಲಿಸಿ.
ಹಂತ 4 : ಅಪ್ಲಿಕೇಷನ್ ನಲ್ಲಿ ಯಾವುದೇ ಪ್ರಮಾಣ ಪತ್ರ/ ದಾಖಲೆಗಳನ್ನು ಅಪ್ಲೋಡ್ ಮಾಡಲು ಸೂಚಿಸಿದ್ದರೆ, ಅವುಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ (ಅಗತ್ಯವಿದ್ದರೆ ಮಾತ್ರ).
ಹಂತ 5 : ಕೊನೆಯದಾಗಿ, ಅಭ್ಯರ್ಥಿಗೆ ಅರ್ಜಿ ಶುಲ್ಕ ಪಾವತಿಸಲು ಸೂಚಿಸಿದ್ದರೆ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಕೆ ಪೂರ್ಣಗೊಳಿಸಿ.
ಅರ್ಜಿಯನ್ನು ಸಲ್ಲಿಸಲು ನಿಗದಿಪಡಿಸಿರುವ ದಿನಾಂಕದ ವಿವರ :
ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ಜೂನ್ 11, 2025
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಜೂನ್ 25, 2025
Indian Coast Guard Recruitment 2025 : Important Links
| NOTIFICATION | CLICK HERE |
| APPLY ONLINE | CLICK HERE |
| Telegram Join Link | Click Here |
| WhatsApp Group Link | Click Here |
ಪ್ರಮುಖ ಸೂಚನೆಗಳು:
ವಿದ್ಯಾರ್ಥಿಗಳು ಕರ್ನಾಟಕ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದ ಬಿಡುಗಡೆ ಮಾಡಿದ ಎಲ್ಲಾ ಅಧಿಸೂಚನೆಗಳನ್ನು ಇದೆ ಅಂತರ್ಜಾಲದಲ್ಲಿ ಪ್ರತಿನಿತ್ಯ ಮಾಹಿತಿಗಳನ್ನ ಕೊಡ್ತಾ ಇರ್ತೀವಿ ಆದಕಾರಣ ಎಲ್ಲಾ ಸ್ನೇಹಿತರು ಈ ( vinodgowda.in ) ಸೈಟ್ ನೋಟಿಫಿಕೇಟಿನ್ ಅಲೋ ಮಾಡಿಕೊಳ್ಳಿ ಹಾಗೂ ನಿಮ್ಮ ಸ್ನೇಹಿತರಿಗೆ ಎಲ್ಲಾ ಕಡೆ ಶೇರ್ ಮಾಡಿ ಇದರಲ್ಲಿ ಇಲಾಖೆಗಳಿಂದ ಬಂದಂತ ಮಾಹಿತಿಗಳು ನೇರವಾಗಿ ಅಪ್ಲೋಡ್ ಮಾಡ್ತಾ ಇರ್ತೀವಿ ಉದ್ಯೋಗದ ಮಾಹಿತಿ ನ್ಯೂಸ್ಗಳು ಪ್ರಚಲಿತ ಘಟನೆಗಳ ಮಾಹಿತಿಗಳು ಎಲ್ಲವನ್ನು ಕೊಡ್ತಾ ಇರ್ತೀವಿ ಫಾಲೋ ಮಾಡಿ ಹಾಗೂ ನಿಮ್ಮ ಸ್ನೇಹಿತರಿಗೆ ಈ ಲೇಖನಿಯನ್ನು ಶೇರ್ ಮಾಡಿ ಜೊತೆಗೆ ನಮ್ಮ (Youtube Channel) ಗಳಾದ 1)Patil Computers, 2) Vinod Gowda Reports ಈ ಎರಡು Channel ಗಳನ್ನ Subscribe ಮಾಡಿಕೊಳ್ಳಿ ಅಲ್ಲಿಯೂ ಕೂಡಾ IMP ಮಾಹಿತಿಗಳು ಜಾಬ್ಸ್ ನೋಟಿಫಿಕೇಟಿನ್ ಆಗಿರಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸ್ಕೀಮ್ ಗಳಾಗಿರಲಿ ಅಲ್ಲಿ ಸಿಗ್ತಾ ಇರುತ್ತವೆ ಅಲ್ಲಿಂದ ನೋಡಿ ತಿಳಿದುಕೊಳ್ಳಬಹುದು ದನ್ಯವಾದಗಳು.
ಕೊನೆಯ ಪದಗಳು : ನಾವು ನೀಡಿದ ಉದ್ಯೋಗ ಮಾಹಿತಿಯನ್ನು ನೀವು ಇಷ್ಟಪಡುತ್ತೀರಿ ಎಂದು ಭಾವಿಸುತ್ತೇವೆ. ಈ ಉದ್ಯೋಗ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ನಿಮ್ಮ ಸ್ನೇಹಿತರಿಗೆ ಶೇರ್ ಮಾಡಲು ಮರೆಯದಿರಿ
